ಅಸ್ಸಾಂ ವಿಧಾನಸಭೆಯಲ್ಲಿ ಜಾನುವಾರು ಸಂರಕ್ಷಣೆ ವಿಧೇಯಕ ಅಂಗೀಕಾರ

Update: 2021-12-23 17:04 GMT

ಗುವಾಹತಿ, ಡಿ. 23: ಜಾನುವಾರು ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಅಸ್ಸಾಂ ವಿಧಾನ ಸಭೆಯಲ್ಲಿ ಗುರುವಾರ ನಡೆದ ಅಧಿವೇಶನದ ಸಂದರ್ಭ ಅಂಗೀಕರಿಸಲಾಯಿತು. ಈ ತಿದ್ದುಪಡಿಯಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಒಂದು ತಿದ್ದುಪಡಿಯಲ್ಲಿ ದೋಣಿ ಹಾಗೂ ಹಡಗು ಸೇರಿದಂತೆ ವಶಪಡಿಸಿಕೊಂಡ ವಾಹನಗಳು ಹಾಗೂ ಸಾಗಾಟ ಸಾಧನಗಳನ್ನು ವಿಚಾರಣೆ ಹಾಗೂ ತನಿಖೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡುವಂತೆ ಆದೇಶಿಸಲು ಸೂಕ್ತ ನ್ಯಾಯಾಲಯಕ್ಕೆ ಅವಕಾಶ ನೀಡುತ್ತದೆ. ಇನ್ನೊಂದು ತಿದ್ದುಪಡಿಯಲ್ಲಿ ಗಡಿ ಜಿಲ್ಲೆಗಳನ್ನು ಹೊರತುಪಡಿಸಿ ಅಂತರ್ ಜಿಲ್ಲೆಗಳಿಗೆ ಜಾನುವಾರುಗಳ ಸಾಗಾಟಕ್ಕೆ ಅವಕಾಶ ನೀಡುತ್ತದೆ. 

ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಡಾ. ಹಿಮಾಂತ ಬಿಸ್ವಾ ಶರ್ಮಾ, ನಾವು ರಾಜ್ಯದಲ್ಲಿ ಗೋ ಹತ್ಯೆಗೆ ಅಂತ್ಯ ಹಾಡಲು ಬಯಸುತ್ತಿದ್ದೇವೆ ಎಂದರು. ನಾವು ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಕುವುದಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸುವುದಿಲ್ಲ. ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಿಗೆ ಜಾನುವಾರುಗಳನ್ನು ಸಾಗಾಟ ಮಾಡುವುದನ್ನು ತಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. ಕಾನೂನು ಬಾಹಿರ ಜಾನುವಾರು ವ್ಯಾಪಾರ ಹಾಗೂ ಸಾಗಾಟದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಹಾಗೂ ಹಾಗೂ ಹರಾಜು ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News