ಎಲ್ಲ ಮಾದರಿಯ ಕ್ರಿಕೆಟ್ ನಿಂದ ಹರ್ಭಜನ್ ಸಿಂಗ್ ನಿವೃತ್ತಿ

Update: 2021-12-24 09:37 GMT

ಹೊಸದಿಲ್ಲಿ: ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಶುಕ್ರವಾರ ಟ್ವಿಟರ್ ಮೂಲಕ ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು NDTV ವರದಿ ಮಾಡಿದೆ.

 ಟೆಸ್ಟ್  ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಮೊದಲ ಭಾರತೀಯ ಹರ್ಭಜನ್, ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ 2001 ಬಾರ್ಡರ್-ಗವಾಸ್ಕರ್ ಸರಣಿಯಲ್ಲಿನ ಅಮೋಘ  ಬೌಲಿಂಗ್‌ ಪ್ರದರ್ಶನವನ್ನು  ಸದಾ ಕಾಲ  ನೆನಪಿಸಿಕೊಳ್ಳುತ್ತಾರೆ. ಅಲ್ಲಿ ಅವರು 3 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆದರು.

2007 (ಟಿ-20) ಮತ್ತು 2011 ರಲ್ಲಿ ಭಾರತದ ಐತಿಹಾಸಿಕ 50  ಓವರ್ ಗಳ ವಿಶ್ವಕಪ್ ವಿಜಯದ ಭಾಗವಾಗಿರುವ ಕೆಲವೇ ಆಟಗಾರರಲ್ಲಿ ಹರ್ಭಜನ್ ಸಿಂಗ್ ಸೇರಿದ್ದಾರೆ. ಮೊದಲ ಆವೃತ್ತಿಯ  ಟಿ-20 ವಿಶ್ವಕಪ್‌ನಲ್ಲಿ ಕಠಿಣ ಹಂತಗಳಲ್ಲಿ ಬೌಲಿಂಗ್ ಮಾಡುವ ಮೂಲಕ 7 ವಿಕೆಟ್‌ಗಳನ್ನು ಪಡೆದಿದ್ದ ಅವರು  2011 ರಲ್ಲಿ ಸ್ಪಿನ್-ಬೌಲಿಂಗ್ ದಾಳಿಯನ್ನು ಮುನ್ನಡೆಸಿದ್ದರು.

ಹರ್ಭಜನ್  2016 ರಲ್ಲಿ ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಪಂದ್ಯ ಆಡಿದ್ದರು. ಹರ್ಭಜನ್ 103 ಟೆಸ್ಟ್‌ಗಳಲ್ಲಿ 417 ವಿಕೆಟ್‌ಗಳನ್ನು ಪಡೆದಿದ್ದಾರೆ.  ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ ಗಳ ಪೈಕಿ ನಾಲ್ಕನೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

"ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಂಡಿವೆ ಹಾಗೂ  ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ  ಇಂದು ನಾನು ವಿದಾಯ ಹೇಳುತ್ತಿದ್ದೇನೆ.  ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯವನ್ನಾಗಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ಹರ್ಭಜನ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News