ಅಬೂಬಕರ್ ಮುಸ್ಲಿಯಾರ್
Update: 2021-12-27 20:15 IST
ಉಪ್ಪಿನಂಗಡಿ : ಹಿರೇಬಂಡಾಡಿ ಗ್ರಾಮದ ಕೆಮ್ಮಾರ ಮಜಲು ನಿವಾಸಿ, ಕೆಮ್ಮಾರ ಮೊಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ (74) ಡಿ. 26ರಂದು ತನ್ನ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಅಬೂಬಕ್ಕರ್ ಮುಸ್ಲಿಯಾರ್ ಅವರು ಚಿಕ್ಕಮಗಳೂರು, ಬಣಕಲ್, ಹಿರೇಬೈಲ್, ಶುಂಠಿಕೊಪ್ಪ, ಚಕಮಕಿ, ಕಳಸ, ಬನ್ನೂರು ಮೊದಲಾದ ಕಡೆಯ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಿ ಕಳೆದ ಕೆಲ ವರ್ಷಗಳಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮೃತರು ಪತ್ನಿ, ಪುತ್ರರು ಮತ್ತು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.