ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ: ನಮ್ಮ ಮೆಟ್ರೊದಿಂದ ರಾತ್ರಿ ಕಡಿಮೆ ರೈಲು ಸಂಚಾರ

Update: 2021-12-27 17:25 GMT

ಬೆಂಗಳೂರು, ಡಿ.27: ಕೊರೋನ ಹಾಗೂ ಒಮೈಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಜ.28ರಿಂದ ರಾತ್ರಿ 10ಗಂಟೆ ನಂತರ ಕಡಿಮೆ ರೈಲು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ಈಗಿರುವ ಮೆಟ್ರೊದ ಪ್ರತಿದಿನದ ಆರಂಭ ಹಾಗೂ ಮುಕ್ತಾಯದ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೊ ರೈಲುಗಳು ಸಂಚರಿಸಲಿವೆ. 

ರವಿವಾರ ಮಾತ್ರ ಬೆಳಗ್ಗೆ 7 ಗಂಟೆಯಿಂದ ಮೆಟ್ರೊ ಸೇವೆ ಇರಲಿದೆ. ಹೊಸ ವೇಳಾಪಟ್ಟಿಯಿಂದ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿಯಿಂದ ಮೊದಲ ರೈಲುಗಳು ಬೆಳಗ್ಗೆ 5 ಗಂಟೆಯಿಂದ ಹೊರಡಲಿವೆ. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎನ್ನಲಾಗಿದೆ.

ಎಲ್ಲ ಟರ್ಮಿನಲ್‌ಗಳಿಂದ ರಾತ್ರಿ 11 ಗಂಟೆಗೆ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ರಾತ್ರಿ 11.30ಕ್ಕೆ ಕೊನೆಯ ರೈಲುಗಳು ಹೊರಡಲಿವೆ.       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News