×
Ad

ಮಥುರಾವನ್ನು ಮುಝಪ್ಫರ್‌ ನಗರ ಆಗಲು ಬಿಡಬೇಡಿ: ರಾಕೇಶ್ ಟಿಕಾಯತ್

Update: 2021-12-28 21:02 IST

ಮಥುರಾ (ಉತ್ತರಪ್ರದೇಶ), ಡಿ. 28: ಯಾತ್ರಿಕರ ನಗರದಲ್ಲಿ ಶಾಂತಿ ಕದಡಲು ಬಯಸುವ ನಿರ್ದಿಷ್ಟ ಶಕ್ತಿಗಳಿಗೆ ಅವಕಾಶ ನೀಡಬೇಡಿ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಸೋಮವಾರ ಜನರಿಗೆ ಎಚ್ಚರಿಸಿದ್ದಾರೆ. 

ಯಾವುದೇ ಪಕ್ಷದ ಹೆಸರು ಉಲ್ಲೇಖಿಸದ, ಟಿಕಾಯತ್, ಅವರು ಮತ ಪಡೆಯುವುದಿಲ್ಲ. ಆದುದರಿಂದ ಜನರು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುವ ಹಾಗೂ ಸರಳ ಜೀವನ ನಡೆಸುತ್ತಿರುವ ಯಾತ್ರಿಕರ ನಗರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದರು. 

ಮುಝಪ್ಫರ್ ನಗರದಂತೆ ಮಥುರಾದ ವಾತಾವರಣವನ್ನು ಕದಡಲು ಬಯಸುತ್ತಿರುವ ಶಕ್ತಿಯ ಪ್ರಯತ್ನವನ್ನು ವಿಫಲಗೊಳಿಸಿ ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರರಾಗಿರುವ ಟಿಕಾಯತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News