55 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಆಸ್ಟ್ರೇಲಿಯದ ಕ್ರಿಕೆಟಿಗ ಸ್ಟೀವ್ ಸ್ಮಿತ್!

Update: 2021-12-31 07:12 GMT

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗುರುವಾರ ಮೆಲ್ಬೋರ್ನ್ ಹೋಟೆಲ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಅವರು ತಮ್ಮ ಅನುಭವವನ್ನು Instagram ನಲ್ಲಿ ಹಂಚಿಕೊಂಡರು.

 ತಂಡದ ಸಹ ಆಟಗಾರ ಮಾರ್ನಸ್ ಲ್ಯಾಬುಶೇನ್ ಅವರು ಸ್ಮಿತ್ ರಿಗೆ ಹೊರಗಿನಿಂದ ಸಹಾಯ ಮಾಡಲು ಪ್ರಯತ್ನಿಸಿದರು. ಲಿಫ್ಟ್‌ನ ಬಾಗಿಲಿನ ಸಣ್ಣ ಅಂತರದಿಂದ ಚಾಕೊಲೇಟ್‌ಗಳನ್ನು ಸಹ ನೀಡಿದರು.

Instagram ನಲ್ಲಿ ತಾನು ಎದುರಿಸಿದ ಕಷ್ಟಗಳನ್ನು  ಹಂಚಿಕೊಂಡ ಸ್ಮಿತ್, “ನಾನು ನನ್ನ ನೆಲದಲ್ಲಿದ್ದೆ. ಆದರೆ ಬಾಗಿಲು ತೆರೆಯಲಿಲ್ಲ. ಮೇಲ್ನೋಟಕ್ಕೆ ಸೇವೆಯಿಂದ ಹೊರಗಿದ್ದಂತೆ ಕಂಡುಬಂತು. ನಾನು ಬಾಗಿಲು ತೆರೆಯಲು ಪ್ರಯತ್ನಿಸಿದೆ. ಮಾರ್ನಸ್ ಇನ್ನೊಂದು ಬದಿಯಲ್ಲಿ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಹೆಚ್ಚು ಪ್ರಯೋಜನವಿಲ್ಲ. ಅದು ನನಗೆ ಕರಾಳ ಸಂಜೆಯಾಗಿತ್ತು'' ಎಂದು ಹೇಳಿದರು.

ಅಂತಿಮವಾಗಿ ಒಬ್ಬ ತಂತ್ರಜ್ಞ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು.  ಸ್ಮಿತ್ ಅವರನ್ನು ಆಸ್ಟ್ರೇಲಿಯನ್ ತಂಡದ ಸಹ ಆಟಗಾರರು  ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

 “ಸುರಕ್ಷಿತವಾಗಿ ಕೋಣೆಗೆ ಮರಳಿದೆ. ಕೊನೆಗೂ ಲಿಫ್ಟ್ ನಿಂದ ಹೊರ ಬಂದೆ. ಆ 55 ನಿಮಿಷಗಳು ಖಂಡಿತವಾಗಿಯೂ ಅದೊಂದು ಮರೆಯಲಾರದ ಅನುಭವವಾಗಿತ್ತು”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News