×
Ad

ಬೆಂಗಳೂರು-ಧಾರವಾಡ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಸಂಚಾರ ರದ್ದು

Update: 2022-01-03 23:21 IST

ಬೆಂಗಳೂರು, ಜ.3: ಕೆಎಸ್‍ಆರ್ ಬೆಂಗಳೂರು-ಧಾರವಾಡ ಸೂಪರ್‍ಫಾಸ್ಟ್ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲಿನ ಸಂಚಾರವನ್ನು ಬೆಂಗಳೂರಿನಿಂದ ಜನವರಿ 8, 11, 17 ಮತ್ತು 22ರಂದು ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇದೇ ರೈಲನ್ನು ಧಾರವಾಡದಿಂದ ಜನವರಿ 4, 9, 12, 18 ಮತ್ತು 23ರಂದು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಕಚೇರಿಯ ಪ್ರಕಟಣೆ ಹೊರಡಿಸಿದೆ. 

ಹೊಸಪೇಟೆ ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ ವಿಶೇಷ ಎಕ್ಸ್‍ಪ್ರೆಸ್ ರೈಲಿನ ಸಂಚಾರವನ್ನು ಜನವರಿ 11ರಂದು, ಕೆಎಸ್‍ಆರ್ ಬೆಂಗಳೂರು ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಂಚಾರವನ್ನು ಜನವರಿ 11ರಂದು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News