×
Ad

ನಾನು 'ರಾಮರಾಜ್ಯ' ಸ್ಥಾಪಿಸುತ್ತೇನೆಂದು ಶ್ರೀಕೃಷ್ಣ ನನಗೆ ಕನಸಿನಲ್ಲಿ ಹೇಳಿದ್ದಾನೆ: ಅಖಿಲೇಶ್‌ ಯಾದವ್

Update: 2022-01-04 11:58 IST

ಹೊಸದಲ್ಲಿ: ಈ ವರ್ಷದ ಅಸೆಂಬ್ಲಿ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ)ಸರಕಾರ  ರಚಿಸಲಿದೆ ಎಂದು ಹೇಳಲು ಭಗವಾನ್ ಕೃಷ್ಣ "ತನ್ನ ಕನಸಿನಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ನಾನು ರಾಮರಾಜ್ಯ ಸ್ಥಾಪಿಸುತ್ತೇನೆಂದು ಹೇಳಿದ್ದಾರೆ" ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾರತೀಯ ಜನತಾ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದನ್ನು ಯಾದವ್ ಉಲ್ಲೇಖಿಸಿದರು.

ಯೋಗಿ ಆದಿತ್ಯನಾಥ್ ಅವರನ್ನು ಮಥುರಾ ಕ್ಷೇತ್ರದಿಂದ ನಾಮನಿರ್ದೇಶನ ಮಾಡುವಂತೆ ಒತ್ತಾಯಿಸಿದ್ದ ಸಂಸದ ಹರನಾಥ್ ಸಿಂಗ್ ಮಥುರಾ ಕ್ಷೇತ್ರದಿಂದ ಉತ್ತರಪ್ರದೇಶ ಸಿಎಂ ಯಶಸ್ವಿಯಾಗುತ್ತಾರೆ ಎಂದು ಶ್ರೀಕೃಷ್ಣ ತನ್ನ ಕನಸಿನಲ್ಲಿ ಬಂದು  ಹೇಳಿದ್ದಾರೆ ಎಂದಿದ್ದರು.

 ಆದರೆ, ಯೋಗಿ ಆದಿತ್ಯನಾಥ್ ಅವರು ಪಕ್ಷ ಬಯಸಿದ ಕಡೆಯಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

 “ಬಾಬಾ (ಯೋಗಿ ಆದಿತ್ಯನಾಥ್) ವಿಫಲರಾಗಿದ್ದಾರೆ. ಯಾರೂ ಅವರನ್ನು ಉಳಿಸಲು ಸಾಧ್ಯವಿಲ್ಲ. ಪ್ರತಿ ರಾತ್ರಿಯೂ ಭಗವಾನ್ ಕೃಷ್ಣ ನನ್ನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಯುಪಿಯಲ್ಲಿ ನಾವು ಸರಕಾರವನ್ನು ರಚಿಸುತ್ತೇವೆ ಎಂದು ಹೇಳುತ್ತಾರೆ" ಎಂದು ಯಾದವ್ ಹೇಳಿದ್ದಾರೆ.

ಯಾದವ್ ಅವರು 2019 ರಲ್ಲಿ ಅಝಂಗಢ ಕ್ಷೇತ್ರದಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ  ಎಸ್‌ಪಿ ನಡುವೆ ತೀವ್ರ ವಾಕ್ಸಮರ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆ, ರಾಮಮಂದಿರ, ಪಿಯೂಷ್ ಜೈನ್ ಪ್ರಕರಣ, ಮಾಫಿಯಾ ರಾಜ್ ಮುಂತಾದ ಹಲವಾರು ವಿಷಯಗಳ ಬಗ್ಗೆ ಉಭಯ ಪಕ್ಷಗಳು ಪರಸ್ಪರ ವಾಗ್ದಾಳಿ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News