×
Ad

ನೈಟ್ ಕರ್ಫ್ಯೂ ಉಲ್ಲಂಘನೆ: ಬೆಂಗಳೂರಿನಲ್ಲಿ 349 ವಾಹನ ಜಪ್ತಿ

Update: 2022-01-04 23:41 IST

ಬೆಂಗಳೂರು, ಜ.4: ಕೋವಿಡ್ ಸಂಬಂಧ ಏಳು ದಿನಗಳಿಂದ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಅವಧಿಯಲ್ಲಿ ಕೊರೋನ ನಿಯಮ ಉಲ್ಲಂಘನೆ ಆರೋಪದಡಿ 349 ವಾಹನಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ರಾತ್ರಿ ಕರ್ಫ್ಯೂ ವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಳೆದ ಏಳು ದಿನಗಳಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ 349 ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಪಶ್ಚಿಮ ವಿಭಾಗದಲ್ಲಿ 113, ಕೇಂದ್ರ ವಿಭಾಗದಲ್ಲಿ 143, ಈಶಾನ್ಯ ವಿಭಾಗದಲ್ಲಿ 79 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News