ಮೆಟ್ರೋದಲ್ಲಿ ಮಾಸ್ಕ್ ಧರಿಸದಿದ್ದರೆ 250 ದಂಡ: ಅಂಜುಂ ಪರ್ವೇಜ್

Update: 2022-01-04 18:17 GMT

ಬೆಂಗಳೂರು, ಜ.4: ನಮ್ಮ ಮೆಟ್ರೋ(ಬಿಎಂಆರ್‍ಸಿಎಲ್) ಸಂಸ್ಥೆ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದು, ಮಾಸ್ಕ್ ಇಲ್ಲದೆ ಮೆಟ್ರೋ ಹತ್ತುವ ಪ್ರಯಾಣಿಕರಿಗೆ ತಪ್ಪದೇ ದಂಡವನ್ನು ವಿಧಿಸುತ್ತೇವೆ ಎಂದು ಬಿಎಂಆರ್‍ಸಿಎಲ್ ಎಂಡಿ ಅಂಜುಂ ಪರ್ವೇಜ್ ತಿಳಿಸಿದ್ದಾರೆ.

ಕೊರೋನ, ಒಮೈಕ್ರಾನ್ ಸೋಂಕಿನ ಹೆಚ್ಚಳದ ಹಿನ್ನೆಲೆ ನಮ್ಮ ಮೆಟ್ರೋ ಮಾಸ್ಕ್ ಹಾಕದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದರು.

ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ, ಮಾಸ್ಕ್ ಇಲ್ಲದೇ ಇರುವವರಿಗೆ ದಂಡ ಹಾಕುತ್ತೇವೆ. ಪ್ರತಿ ಮೆಟ್ರೋ ನಿಲ್ದಾಣದಲ್ಲೂ ಮೆಟ್ರೋ ಸಿಬ್ಬಂದಿ ಪ್ರಯಾಣಿಕರ ಮೇಲೆ ನಿಗಾ ಇಡಲಿದ್ದಾರೆ ಎಂದು ತಿಳಿಸಿದರು. ಸೆಕ್ಯೂರಿಟಿ ಗಾಡ್ರ್ಸ್, ಹೋಂ ಗಾಡ್ರ್ಸ್, ಮಾರ್ಷಲ್‍ಗಳಿಂದ ಮೆಟ್ರೋ ಸ್ಟೇಷನ್, ಪ್ಲಾಟ್ ಫಾರಂಗಳಲ್ಲಿ ನಿಗಾ ವಹಿಸಲಾಗುವುದು. ಮಾಸ್ಕ್ ಹಾಕದ ಪ್ರತಿ ಪ್ರಯಾಣಿಕರಿಗೆ 250 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News