ಬಿಟಿವಿ ಹೆಸರಿನಲ್ಲಿ ಹಣ ವಸೂಲಿ ಆರೋಪ: ಬಿಟಿವಿ ಸಂಪಾದಕರ ದೂರಿನ ಮೇರೆಗೆ ಪರ್ತಕರ್ತನ ಬಂಧನ

Update: 2022-01-07 16:41 GMT
ಬಂಧಿತ ಪತ್ರಕರ್ತ 

ಬೆಂಗಳೂರು, ಜ.7: ಬಿಟಿವಿ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಟಿವಿ ಸಂಪಾದಕರು ನೀಡಿದ ದೂರಿನ ಆಧಾರದ ಮೇರೆಗೆ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಿಟಿವಿಯ ಕಚೇರಿಯಲ್ಲಿ ಈ ಹಿಂದೆ ವೀಡಿಯೊ ಎಡಿಟರ್ ಆಗಿದ್ದ ತೀರ್ಥಪ್ರಸಾದ್ ಹಲವು ದಿನಗಳಿಂದ ತಂಡವೊಂದನ್ನು ಕಟ್ಟಿಕೊಂಡು ವ್ಯವಸ್ಥಿತವಾಗಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಹಲವರು ಬಿಟಿವಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.

ಬಿಟಿವಿ ಹಿರಿಯ ಸಿಬ್ಬಂದಿಯ ಹೆಸರುಗಳಲ್ಲಿ ನಕಲಿ ಮೊಬೈಲ್ ನಂಬರ್ ನೋಟ್ ಮಾಡಿಕೊಂಡಿದ್ದ ತೀರ್ಥ ಪ್ರಸಾದ್ ಬಿಟಿವಿ ಹಿರಿಯ ಸಿಬ್ಬಂದಿ ಜೊತೆ ಮಾತನಾಡಿದ್ದೇನೆಂದು ಸುಳ್ಳು ಹೇಳಿ ವಂಚಿಸುತ್ತಿದ್ದ ಎನ್ನಲಾಗಿದೆ.

ಈತನ ವಿರುದ್ಧ ಎರಡು ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಾಗಿದ್ದು, ತೀರ್ಥ ಪ್ರಸಾದ್ ಜೊತೆ ಇನ್ನೂ 7 ಮಂದಿಯ ತಂಡ ಇದ್ದು, ತಂಡದಲ್ಲಿ ಇತರೆ ಸುದ್ದಿವಾಹಿನಿಯ ಪತ್ರಕರ್ತರೂ ಇದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News