×
Ad

ವಾರಾಂತ್ಯ ಕರ್ಫ್ಯೂ: ಬಿಎಂಟಿಸಿ ಬಸ್ ಸಂಚಾರಕ್ಕೆ ಕಾಸಿಯಾ ಮನವಿ

Update: 2022-01-07 22:39 IST

ಬೆಂಗಳೂರು, ಜ.7: ಸರಕಾರವು ನಗರದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದು, ಕೈಗಾರಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಹಾಗಾಗಿ ಕಾರ್ಮಿಕರು ಗುರುತಿನ ಚೀಟಿಯೊಂದಿಗೆ ಕೆಲಸಕ್ಕೆ ಹಾಜರಾಗಬಹುದಾಗಿದ್ದು, ಬಿಎಂಟಿಸಿ ಬಸ್ ಎಂದಿನಂತೆ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮನವಿ ಮಾಡಿದೆ.

ಸಣ್ಣ ಕೈಗಾರಿಕೆಗಳ ಕಾರ್ಮಿಕರು ಪ್ರಯಾಣಕ್ಕಾಗಿ ಬಿಎಂಟಿಸಿ ಬಸ್‍ಗಳನ್ನು ಅವಲಂಬಿಸಿದ್ದಾರೆ. ವಾರಾಂತ್ಯದ ಕರ್ಫ್ಯೂ ನಲ್ಲಿ ಸೀಮಿತ ಸಂಖ್ಯೆಯ ಬಸ್‍ಗಳು ರಸ್ತೆಗೆ ಇಳಿಯಲಿವೆ ಎಂದು ಬಿಎಂಟಿಸಿ ತಿಳಿಸಿದೆ. ಒಂದು ವೇಳೆ ಬಸ್ ವ್ಯವಸ್ಥೆ ಇಲ್ಲದಿದ್ದರೆ, ಕಾರ್ಮಿಕರು ಕಾರ್ಖಾನೆಗಳನ್ನು ತೊರೆದು ಮತ್ತೊಮ್ಮೆ ತಮ್ಮ ಊರುಗಳಿಗೆ ಸಾಮೂಹಿಕ ವಲಸೆ ಹೋಗುವ ಸಾಧ್ಯತೆಗಳಿವೆ ಎಂದು ಕಾಸಿಯಾ ತಿಳಿಸಿದೆ.

ಹಾಗಾಗಿ ಕಾರ್ಮಿಕರು ಕಾರ್ಖಾನೆಗಳಿಗೆ ಬರಲು ಮತ್ತು ಮನೆಗೆ ಹೋಗಲು ಅನುಕೂಲ ಆಗುವಂತೆ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಕಾಸಿಯಾ ಬಿಎಂಟಿಸಿಗೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News