×
Ad

ಬೆಂಗಳೂರು: ದುಬಾರಿ ಗಡಿಯಾರ ಕಳವು; ಪ್ರಕರಣ ದಾಖಲು

Update: 2022-01-08 23:47 IST

ಬೆಂಗಳೂರು, ಜ.8: ಇಲ್ಲಿನ ಇಂದಿರಾನಗರದ ಗಡಿಯಾರ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು 2 ಕೋಟಿ ರೂ. ಮೌಲ್ಯದ ದುಬಾರಿ ಕೈಗಡಿಯಾರಗಳನ್ನು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಶಿವಾಜಿನಗರದ ನಿವಾಸಿ ಶಾಮೋಯಿಲ್ ನೀಡಿರುವ ದೂರಿನನ್ವಯ ಇಲ್ಲಿನ ಇಂದಿರಾನಗರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಾಗಿದೆ.

ಶಾಮೋಯಿಲ್ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಜಿಮ್ಸ್ ಟೈಮ್ಸ್ ಪ್ರೈ.ಲಿಮಿಟೆಡ್ ಹೆಸರಿನ ಗಡಿಯಾರ ಮಳಿಗೆ ಹೊಂದಿದ್ದಾರೆ. ಜ.5ರಂದು ಬೆಳಗ್ಗೆ ಮಳಿಗೆಯ ಬಾಗಿಲು ತೆರೆದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ರೆಡಿಯೋ ಕಂಪೆನಿಯ 129, ಲಾನ್‍ಜಿನೆಸ್ ಕಂಪೆನಿಯ 29, ಒಮೆಗಾ ಸಂಸ್ಥೆಯ 13 ವಾಚ್‍ಗಳು ಸೇರಿ ಒಟ್ಟು 2 ಕೋಟಿ ರೂ. ಮೌಲ್ಯದ 171 ಕೈ ಗಡಿಯಾರಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News