×
Ad

ಬೆಂಗಳೂರು: ಪೊಲೀಸರಿಂದಲೇ ರಕ್ತಚಂದನ ಸಾಗಾಟ ಆರೋಪ; ಎಫ್‍ಐಆರ್ ದಾಖಲು

Update: 2022-01-10 21:01 IST

ಬೆಂಗಳೂರು, ಜ.10: ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರ ವಿರುದ್ಧ ಇಲ್ಲಿನ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಸಿಸಿಬಿ ಮುಖ್ಯ ಕಾನ್‍ಸ್ಟೇಬಲ್ ಮೋಹನ್, ಮಹದೇವಪುರ ಠಾಣೆಯ ಪೊಲೀಸ್ ಸಿಬ್ಬಂದಿ ಮಮ್ತೇಶ್ ಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಡಿ.15ರಂದು ಅಕ್ರಮವಾಗಿ ರಕ್ತಚಂದನ ತುಂಡುಗಳ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡುವ ನೆಪದಲ್ಲಿ ಆರೋಪಿಗಳಿಂದ ರಕ್ತಚಂದನ ತುಂಡು ವಶಕ್ಕೆ ಪಡೆದಿದ್ದ ಪೊಲೀಸರು ವಶಕ್ಕೆ ಪಡೆದಿದ್ದಂತಹ ತುಂಡುಗಳನ್ನ ಮಾರಾಟ ಮಾಡಿದ್ದರು ಎನ್ನಲಾಗಿದೆ.

ಜತೆಗೆ, ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟು ಕಳಿಸಿದ್ದರು. ಈ ಬಗ್ಗೆ ಹೊಸಕೋಟೆ ಪೊಲೀಸರ ತನಿಖೆಯ ವೇಳೆ ಅಕ್ರಮ ಬಯಲಾಗಿತ್ತು. ಈ ಸಂಬಂಧ ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ವರದಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News