ಬೆಂಗಳೂರು: ಕಳವು ಪ್ರಕರಣ; ದೂರುದಾರನನ್ನೇ ಬಂಧಿಸಿದ ಪೊಲೀಸರು
ಬೆಂಗಳೂರು, ಜ.13: ನಗದು ಕಳವು ದೂರು ಕೊಟ್ಟ ವ್ಯಕ್ತಿಯೇ ಪೊಲೀಸರಿಗೆ ಸಿಕ್ಕಿಬಿದ್ದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅರುಣ್ ಕುಮಾರ್ ಎಂಬಾತನನ್ನು ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯಾರೋ ಕಣ್ಣಿಗೆ ಖಾರದಪುಡಿ ಎರಚಿ ತನ್ನ ಬಳಿಕಯಿದ್ದ 4 ಲಕ್ಷ ರೂ ದೋಚಿದ್ದಾರೆ ಎಂದು ಅರುಣ್, ಇಂದು ಬೆಳಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ, ಕಳ್ಳತನವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಸಿಕ್ಕಿರಲಿಲ್ಲ. ಈ ಬಗ್ಗೆ ಅನುಮಾನಗೊಂಡು ದೂರುದಾರ ಅರುಣ್‍ನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತನೆ ಆರೋಪಿ ಎಂಬುದು ಗೊತ್ತಾಗಿದೆ.
ಬ್ಯಾಂಕಿನ ಶಾಖೆಗಳಿಗೆ ಹಣ ನೀಡುವ ಕೆಲಸ ಮಾಡುತ್ತಿದ್ದ ಆರೋಪಿ ಅರುಣ್, 1 ಲಕ್ಷ ರೂ. ಹಣ ಬೇಕೆಂದು ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲಕನ ಬಳಿ ಕೇಳಿದ್ದ. ಆದರೆ, ಮಾಲಕ ಹಣ ನೀಡಿರಲಿಲ್ಲ. ಇದಾದ ಬಳಿಕ 8 ಲಕ್ಷ ಹಣ ತರುತ್ತಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಸುಲಿಗೆ ಮಾಡಲಾಯಿತು ಎಂದು ತಿಳಿಸಿದ್ದ. ಈ ಸಂಬಂಧ ತನಿಖೆ ನಡೆಸಿದಾಗ ಈತನೆ ಹಣ ವಂಚನೆ ಮಾಡಿರುವುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Excellent work by @DCPWestBCP ,PI Byatarayanpura.. case of Rs 4 lakh cash theft detected within 2 hrs.. https://t.co/ULrTu55kfd
— Sandeep Patil IPS (@ips_patil) January 12, 2022