ಪೇರಿಮಾರ್ ಮೊಹಲ್ಲಾ ಖಾಝಿ ಸ್ವೀಕಾರ ಸಮಾರಂಭ

Update: 2022-01-13 07:25 GMT

ಬಂಟ್ವಾಳ, ಡಿ.13: ಬದುಕಿನ ಸಂತೋಷದ ಕ್ಷಣಗಳನ್ನು ವಿಕೃತವಾಗಿ ಸಂಭ್ರಮಿಸಿ ಇಸ್ಲಾಮಿನ ಬಗ್ಗೆ ತಪ್ಪು ಸಂದೇಶಗಳನ್ನು ಹರಡುವ ಪ್ರಕ್ರಿಯೆಯ ವಿರುದ್ಧ ಯುವ ಜನತೆಯು ಜಾಗೃತರಾಗಬೇಕೆಂದು ಝೈನುಲ್ ಉಲೆಮಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಹೇಳಿದರು. 

ಇತ್ತೀಚೆಗೆ ತಾಲೂಕಿನ ಮಾರಿಪಳ್ಳ ಪೇರಿಮಾರ್ ಮೊಹಲ್ಲಾದ ಖಾಝಿ ಸ್ವೀಕಾರ ಸಮಾರಂಭದಲ್ಲಿ ಖಾಝಿ ಪದವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತು ಸಾದಾತ್ ಸೈಯದ್ ಫಝಲ್ ಕೋಯಮ್ಮ ತಂಙಳ್ ಅವರು ಖಾಝಿ ಪದವಿ ಪ್ರಧಾನ ಮಾಡಿ ಖಾಝಿ ಹುದ್ದೆಯ ಮಹತ್ವವನ್ನು ವಿವರಿಸಿದರು.

ಸುನ್ನಿ ಜಂಇಯ್ಯತುಲ್ ಉಲೆಮಾ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ವಿಷಯ ಮಂಡಿಸಿದರು. ಮಸ್ಜಿದುಲ್ ಖಿಲ್ ರ್ ಪೇರಿಮಾರ್ ಇದರ ಅಧ್ಯಕ್ಷ ಹಾಜಿ ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಮುಹಮ್ಮದ್ ರಫೀಕ್ ಸಹದಿ ಅಲ್ ಅಫ್ಲಲಿ ಉದ್ಘಾಟನಾ ಭಾಷಣ ಮಾಡಿದರು. 

ಸ್ವಾಲಾತ್ ವಾರ್ಷಿಕ ಬಳಿಕ 2020-21ರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಲುಲ್ ಅವರು ಮಂಡಿಸಿದರು.

ಮಸೀದಿಯ ಉಪಾಧ್ಯಕ್ಷ ಹುಸೈನ್ ಬಾಲ್ದಬೊಟ್ಟು, ಕೋಶಾಧಿಕಾರಿ ಪಿ.ಎಂ.ಶಾಫಿ, ಎಸ್.ವೈ.ಎಸ್. ಫರಂಗಿಪೇಟೆ ಸೆಂಟರ್ ಅಧ್ಯಕ್ಷ ಅಬ್ದುಲ್ ಲತೀಫ್ ಮುಸ್ಲಿಯಾರ್, ಮುಹಮ್ಮದ್ ನಿಝಾಮಿ, ಮುಹಮ್ಮದ್ ನವಾಝ್ ಝೈನಿ, ಹೈದರ್ ಮುಸ್ಲಿಯಾರ್, ಪಿ.ಎಂ.ನಝೀರ್, ಅಮೀನ್ ಮಾಲಿಕ್ ಹಾಗೂ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಲುಲ್ ಸ್ವಾಗತಿಸಿ, ವಂದಿಸಿದರು. ಹನೀಫ್ ಇಂಜಿನಿಯರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News