3ನೇ ಟೆಸ್ಟ್: ಥರ್ಡ್ ಅಂಪೈರ್ ನಿರ್ಣಯಕ್ಕೆ ಸ್ಟಂಪ್ ಮೈಕ್ ನಲ್ಲಿ ಅಸಮಾಧಾನ ಹೊರ ಹಾಕಿದ ವಿರಾಟ್ ಕೊಹ್ಲಿ

Update: 2022-01-14 14:54 GMT
Photo: Twitter

ಕೇಪ್ ಟೌನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದ್ದು ಅಂಪೈರ್ ತೀರ್ಪು ಪರಾಮರ್ಶೆ(ಡಿಆರ್ ಎಸ್)ನಿಖರತೆ ಕುರಿತು ಮತ್ತೊಮ್ಮೆ ಅನುಮಾನ ಮೂಡಿದೆ. ಥರ್ಡ್ ಅಂಪೈರ್ ನಿರ್ಣಯಕ್ಕೆ ಭಾರತದ ನಾಯಕ ವಿರಾಟ್ ಕೊಹ್ಲಿ ಸ್ಟಂಪ್ ಮೈಕ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

3ನೇ ದಿನದಾಟವಾದ ಗುರುವಾರ ದಕ್ಷಿಣ ಆಫ್ರಿಕಾದ ದ್ವಿತೀಯ ಇನಿಂಗ್ಸ್ ನ 21ನೇ ಓವರ್ ನಲ್ಲಿ ಸ್ಪಿನ್ನರ್ ಅಶ್ವಿನ್ ಬೌಲಿಂಗ್ ನಲ್ಲಿ ಆನ್ ಫೀಲ್ಡ್ ಅಂಪೈರ್ ಮರಾಯಿಸ್ ಎರಾಸ್ಮಸ್ ಅವರು ಡೀನ್ ಎಲ್ಗರ್ ವಿರುದ್ಧ ಔಟ್ ತೀರ್ಪು ನೀಡಿದರು. ಈ ಸಂದರ್ಭದಲ್ಲಿ ಎಲ್ಗರ್ ಡಿಆರ್ ಎಸ್ ಮೊರೆ ಹೋದರು. ರಿಪ್ಲೇ ನಲ್ಲಿ ಚೆಂಡು ಬ್ಯಾಟ್ ಗೆ ತಗಲದೆ ನೇರವಾಗಿ ಎಲ್ಗರ್ ಕಾಲಿಗೆ ಅಪ್ಪಳಿಸಿತ್ತು. ಆದರೆ ಡಿಆರ್ ಎಸ್ ನಲ್ಲಿ ಚೆಂಡು ಲೆಕ್ಕಕ್ಕೂ ಮೀರಿ ಪುಟಿದೇಳುವ ಮೂಲಕ ವಿಕೆಟ್ ನ ಮೇಲಿಂದ ಹಾರಿ ಹೋಯಿತು. ಬಳಿಕ ಮೂರನೇ ಅಂಪೈರ್  ನಾಟೌಟ್ ಎಂದು ತೀರ್ಪು ನೀಡಿದರು. ಈ ತೀರ್ಪು ಭಾರತದ ಆಟಗಾರರು ಅದರಲ್ಲೂ ಮುಖ್ಯವಾಗಿ ನಾಯಕ ಕೊಹ್ಲಿಯ ಕೋಪಕ್ಕೆ ಕಾರಣವಾಯಿತು.

ಕೊಹ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಲ್ಲದೆ ಅಶ್ವಿನ್ ಓವರ್ ಮುಗಿದ ಬಳಿಕ ಸ್ಟಂಪ್ ಮೈಕ್ ಸಮೀಪಕ್ಕೆ ತೆರಳಿ ತಮ್ಮ ಅಸಮಾಧಾನ ಮಾತಿನಲ್ಲೇ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News