ಮೂರನೇ ಟೆಸ್ಟ್: ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಗೆಲುವು, ಸರಣಿ ಕೈವಶ

Update: 2022-01-14 12:09 GMT

 ಕೇಪ್‌ಟೌನ್, ಜ.14: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

  ಗೆಲ್ಲಲು 212 ರನ್ ಸುಲಭ ಸವಾಲು ಪಡೆದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟವಾದ ಶುಕ್ರವಾರ 2 ವಿಕೆಟ್ ನಷ್ಟಕ್ಕೆ 101 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. 63.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 212 ರನ್ ಗಳಿಸಿತು.

 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 57 ರನ್ ಸೇರಿಸಿದ ರಾಸಿ ವಾನ್‌ಡರ್ ಡುಸ್ಸೆನ್(ಔಟಾಗದೆ 41, 95 ಎಸೆತ, 3 ಬೌಂ.) ಹಾಗೂ ಟೆಂಬಾ ಬವುಮಾ(ಔಟಾಗದೆ 32, 58 ಎಸೆತ, 5 ಬೌಂ.) ತಂಡವನ್ನು ಗೆಲುವಿನ ದಡ ಸೇರಿಸಿದರು. ಅಶ್ವಿನ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಬವುಮಾ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದರು.

ಮೂರನೇ ಕ್ರಮಾಂಕದ ಬ್ಯಾಟರ್ ಪೀಟರ್ಸನ್ ಜೀವನಶ್ರೇಷ್ಠ ಇನಿಂಗ್ಸ್ ಆಡುವುದರೊಂದಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊತ್ತ ಮೊದಲ ಸರಣಿ ಜಯಿಸುವ ವಿಶ್ವದ ನಂ.1 ತಂಡ ಭಾರತದ ಕನಸನ್ನು ಭಗ್ನಗೊಳಿಸಿದರು. ಪಂದ್ಯದಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿದ ಕೀಗನ್ ಪೀಟರ್ಸನ್(82, 113 ಎಸೆತ, 10 ಬೌಂಡರಿ)ದಕ್ಷಿಣ ಆಫ್ರಿಕಾದ ಭರ್ಜರಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ನಾಯಕ ಎಲ್ಗರ್(30 ರನ್, 96 ಎಸೆತ)ಕೂಡ ತಂಡದ ಗೆಲುವಿಗೆ ನೆರವಾದರು.

ಭಾರತದ ಪರ ಶಾರ್ದೂಲ್ ಠಾಕೂರ್(1-22), ಮುಹಮ್ಮದ್ ಶಮಿ(1-41) ಹಾಗೂ ಜಸ್‌ಪ್ರೀತ್ ಬುಮ್ರಾ(1-54)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News