ನಿರುಪಯುಕ್ತ ವಾಹನಗಳ ಬಿಡಿ ಭಾಗಗಳಿಂದ ಕಂಗೊಳಿಸಿದ ಯಲಹಂಕ

Update: 2022-01-15 18:29 GMT

ಬೆಂಗಳೂರು, ಜ.15: ನಿರುಪಯುಕ್ತ ವಾಹನಗಳ ಬಿಡಿಭಾಗಗಳು ವಿವಿಧ ಕಲಾಕೃತಿಗಳು ಯಲಹಂಕದ ಜನರನ್ನ ಕೈಬೀಸಿ ಕರೆಯುತ್ತಿವೆ. ಹಗಲಲ್ಲಿ ಲೋಹದ ಕಲಾಕೃತಿಗಳು ಕಾಣುವ ಕುದುರೆ, ಗ್ಲೋಬ್, ಆಟೋ, ಫಿಯಟ್ ಕಾರುಗಳು ರಾತ್ರಿ ವೇಳೆ ದೀಪಾಲಂಕಾರದಿಂದ ದಾರಿಹೋಕರ ಕಣ್ಮನ ಸೆಳೆಯುತ್ತಿವೆ.

ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್‍ಇಎಸ್ ಸರ್ಕಲ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಡೈರಿ ವೃತ್ತ ಫುಟ್‍ಪಾತ್‍ನಲ್ಲಿ ವಿವಿಧ ಕಲಾಕೃತಿಗಳು ಜನರ ಆಕರ್ಷಣೆ ಕೇಂದ್ರವಾಗಿದೆ, ಮಕರ ಸಂಕ್ರಾಂತಿ ಹಬ್ಬವನ್ನ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲಾಗಿತ್ತು, ಫುಟ್‍ಪಾತ್‍ನಲ್ಲಿ ನಿರ್ಮಾಣ ಮಾಡಲಾಗಿರುವ ಲೋಹದ ಕಲಾಕೃತಿಗಳನ್ನ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಉದ್ಘಾಟನೆ ಮಾಡಿದರು.

ಬಿಬಿಎಂಪಿ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ, ಇದಕ್ಕಾಗಿ ಸುಮಾರು 3 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ವಿಶೇಷವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನ ಬಳಸಿಕೊಂಡು ಲೋಹದ ಕಲಾಕೃತಿಗಳನ್ನ ಮಾಡಲಾಗಿದೆ.

ಫುಟ್‍ಪಾತ್‍ನ ಬದಿಯಲ್ಲಿ ಸುಸಜ್ಜಿತವಾಗಿ ಜೋಡಿಸಲಾಗಿರುವ ಲೋಹದ ಕಲಾಕೃತಿಗಳು ರಾತ್ರಿ ವೇಳೆ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಜನರನ್ನ ತನ್ನತ್ತ ಆಕರ್ಷಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಯಲಹಂಕ ನಗರವನ್ನ ಮತ್ತಷ್ಟು ವರ್ಣರಂಜಿತವಾಗಿಸಲು ಮತ್ತಷ್ಟು ಕ್ರಮ ಕೈಗೊಳ್ಳಲು ಸರಕಾರ ಬದ್ಧ ಎಂದು ಎಸ್.ಆರ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News