ಕರ್ಣಾಟಕ ಬ್ಯಾಂಕ್ 'ಬಿಸಿನೆಸ್ ಟಾನಿಕ್’- 150ನೇ ಸಂಚಿಕೆಯ ಕಾರ್ಯಕ್ರಮಕ್ಕೆ ಚಾಲನೆ

Update: 2022-01-16 14:51 GMT

ಮಂಗಳೂರು, ಜ.16: 'ನಮ್ಮ ಕುಡ್ಲ' ವಾಹಿನಿ ಪ್ರಸ್ತುತಿಯ ಕರ್ಣಾಟಕ ಬ್ಯಾಂಕ್ 'ಬಿಸಿನೆಸ್ ಟಾನಿಕ್’- 150ನೇ ಸಂಚಿಕೆಯ ಕಾರ್ಯಕ್ರಮಕ್ಕೆ ನಗರದ ಕೆನರಾ ಕಾಲೇಜಿನ ಸುಧೀಂದ್ರ ಸಭಾಂಗಣದಲ್ಲಿ ರವಿವಾರ ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕರ್ಣಾಟಕ ಬ್ಯಾಂಕ್ ಇಂದು ಕೇವಲ ಬ್ಯಾಂಕ್ ಆಗಿ ಉಳಿದಿಲ್ಲ, ಬದಲಾಗಿ ಸಾಮಾಜಿಕ-ಆರ್ಥಿಕ ಕ್ರಾಂತಿಯ ಚಳುವಳಿಯಾಗಿ ರೂಪುಗೊಂಡಿವೆ. ಇದೀಗ ಶತಮಾನ ಸಂಭ್ರಮದ ಹೊಸ್ತಿಲಲ್ಲಿರುವ ಕರ್ಣಾಟಕ ಬ್ಯಾಂಕ್ ಸಮಾಜದ ಜೊತೆ ಬೆಸೆಯುವ ಧ್ಯೇಯ ಹೊಂದಿಕೊಂಡಿದೆ ಎಂದರು.

ಮುಖ್ಯ ಅತಿಥಿಯಾಗಿ ವರ್ಚುವಲ್ ಮೂಲಕ ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಬ್ಯಾಂಕ್ ವಲಯ ಸಹಿತ ಇಡೀ ಆರ್ಥಿಕ ರಂಗಕ್ಕೆ ಚೈತನ್ಯ ತುಂಬುವ ಶಕ್ತಿಯಾಗಬೇಕಾಗಿದೆ ಎಂದರು.

ವೇದಿಕೆಯಲ್ಲಿ ಇಸ್ಕಾನ್ ಸಂಸ್ಥೆ ಮಂಗಳೂರು ಇದರ ಕಾರ್ಯದರ್ಶಿ ಸನಂದನ ದಾಸ, ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್, ದ.ಕ ಹಾಲು ಉತ್ಪಾಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಹ್ಯಾಂಗ್ಯೋ ಐಸ್‌ಕ್ರೀಂ ಲಿ.ನ ಎಂಡಿ ಪ್ರದೀಪ್ ಜಿ. ಪೈ, ಸಂಪನ್ಮೂಲ ವ್ಯಕ್ತಿಗಳಾದ ಸಿಎ ರುದ್ರಮೂರ್ತಿ, ಸಿಎ ಅನಿಲ್ ಭಾರದ್ವಾಜ್, ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಬಿ. ಕರ್ಕೇರಾ, ಲೀಲಾಕ್ಷ ಬಿ. ಕರ್ಕೇರಾ, ಮೋಹನ್ ಬಿ. ಕರ್ಕೇರಾ ಉಪಸ್ಥಿತರಿದ್ದರು.

ಮುರಳೀಧರ್ ಶೆಣೈ ಪ್ರಾರ್ಥನೆಗೈದರು. ಸಿಎ ಯಶಸ್ವಿನಿ ಹಾಗೂ ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
*ಕರ್ಣಾಟಕ ಬ್ಯಾಂಕ್‌ನ ಎಂಡಿ ಮಹಾಬಲೇಶ್ವರ ಎಂ.ಎಸ್, ಬಿಸಿನೆಸ್ ಟಾನಿಕ್ ಕಾರ್ಯಕ್ರಮ ನಿರ್ದೇಶಕ, ಸಮನ್ವಯಕಾರ ಸಿಎ ಎಸ್.ಎಸ್. ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಡಾ.ಸುರೇಶ ನೆಗಳಗುಳಿ ಅವರ ಱಧೀರತಮ್ಮನ ಕಬ್ಬ’ ಇದರ 3ನೇ ಸಂಪುಟ ಲೋಕಾರ್ಪಣೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News