ಕೋವಿಡ್ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 15ಕೋಟಿ ರೂ. ಅಧಿಕ ದಂಡ ವಸೂಲಿ ಮಾಡಿದ ಮಾರ್ಷಲ್‍ಗಳು

Update: 2022-01-16 15:10 GMT

ಬೆಂಗಳೂರು, ಜ. 16: ಕೋವಿಡ್ ಮಾರ್ಗಸೂಚಿ ಪಾಲಿಸದೆ ಮಾಸ್ಕ್ ಹಾಕದ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 22 ತಿಂಗಳಿನಿಂದ 15,72,30,620 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಿದೆ.

ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪಾಲಿಕೆಯು ಕೋವಿಡ್ ಮುಂಜಾಗೃತ ಕ್ರಮಗಳನ್ನು ಪಾಲಿಸದ ಜನರಿಗೆ ದಂಡವನ್ನು ವಿಧಿಸಲು ತೀರ್ಮಾಸಿ, 2020ರ ಮೇ ತಿಂಗಳಿನಲ್ಲಿ ಮಾರ್ಷಲ್‍ಗಳನ್ನು ನೇಮಿಸಲಾಯಿತು. ಅಂದಿನಿಂದ ಇಂದಿನವರೆಗೆ ಮಾಸ್ಕ್ ಧರಿಸದವರಿಂದ 14,95,59,451 ರೂ.ಗಳನ್ನು, ಸಾಮಾಜಿಕ ಅಂತ ಪಾಲನೆ ಮಾಡದವರಿಂದ 76,71,169ರೂ.ಗಳನ್ನು ಸಂಗ್ರಹ ಮಾಡಲಾಗಿದೆ.  

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಅಥವಾ ಅಂತರ ಪಾಲಿಸದ ಜನರಿಗೆ ಮಾರ್ಷಲ್‍ಗಳು ತಲಾ 250 ರೂ.ಗಳಂತೆ ದಂಡ ವಿಧಿಸುತ್ತಿದ್ದು ಇದೇ ತಿಂಗಳಿನಲ್ಲಿ 35,31,750 ರೂ.ದಂಡ ಸಂಗ್ರಹವಾಗಿದೆ. 2020ರ ಅಕ್ಟೋಬರ್ ನಿಂದ 2021ರ ಜನವರಿಯ ವರೆಗೆ ಪ್ರತಿ ತಿಂಗಳು ಒಂದು ಕೋಟಿ ರೂ.ಗಿಂತ ಅಧಿಕ ದಂಡ ಸಂಗ್ರಹವಾಗಿದೆ ಎಂದು ಪಾಲಿಕೆ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News