ಆಲ್ಕೋಹಾಲ್ ಇದ್ದುದಕ್ಕೆ ಸಂಭ್ರಮಾಚರಣೆಯಿಂದ ದೂರನಿಂತ ಆಸೀಸ್‌ ಕ್ರಿಕೆಟಿಗ ಉಸ್ಮಾನ್‌ ಖ್ವಾಜಾ: ಸಹಆಟಗಾರರು ಮಾಡಿದ್ದೇನು?

Update: 2022-01-17 07:29 GMT
Photo: Timesofindia

ಹೊಬರ್ಟ್: ಆಸ್ಟ್ರೇಲಿಯವು ರವಿವಾರ ಅಂತ್ಯಗೊಂಡ ಐದನೇ ಮತ್ತು ಅಂತಿಮ ಪಂದ್ಯದಲ್ಲಿ  ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವನ್ನು 146 ರನ್ಗಳಿಂದ ಸೋಲಿಸಿತು. ಈ ಗೆಲುವಿನ ಮೂಲಕ 5 ಪಂದ್ಯಗಳ ಆ್ಯಶಸ್ ಸರಣಿಯನ್ನು 4-0 ಅಂತರದಿಂದ ಗೆದ್ದುಕೊಂಡಿತು.  ಆಸ್ಟ್ರೇಲಿಯ ಆಟಗಾರರ ಟ್ರೋಫಿ ಗೆದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ನಾಯಕ ಪ್ಯಾಟ್ ಕಮಿನ್ಸ್, ಶಾಂಪೇನ್‌ (ಆಲ್ಕೋಹಾಲ್) ಬಾಟಲ್‌ ಗಳಿದ್ದುದಕ್ಕೆ ದೂರ ಸರಿದು ನಿಂತಿದ್ದ ಉಸ್ಮಾನ್ ಖ್ವಾಜಾ ಅವರನ್ನು ಸನ್ನೆ ಮಾಡಿ ಕರೆದು, ಶಾಂಪೇನ್‌ ಪಕ್ಕಕ್ಕಿಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಆ್ಯಶಸ್ ಟ್ರೋಫಿಯನ್ನು ಹಸ್ತಾಂತರಿಸಿದ ನಂತರ ಆಸೀಸ್ ಆಟಗಾರರು ಪರಸ್ಪರ ಸ್ಪ್ರೇ ಮಾಡಲು ಶಾಂಪೇನ್ ಬಾಟಲಿಗಳನ್ನು ತೆರೆದರು. ಆದರೆ ಖ್ವಾಜಾ ಟ್ರೋಫಿ ಗೆದ್ದ ಸಂಭ್ರಮದ ಭಾಗವಾಗಲು ಸಾಧ್ಯವಾಗುವುದಿಲ್ಲ ಎಂದು ಅರಿತ ಕಮಿನ್ಸ್ ಶಾಂಪೇನ್ ಬಾಟಲಿಗಳನ್ನು ದೂರವಿಡಲು ತಮ್ಮ ತಂಡದ ಸಹ ಆಟಗಾರರಿಗೆ ಸೂಚಿಸಿದರು ಹಾಗೂ  ಟ್ರೋಫಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು  ಖ್ವಾಜಾ ಅವರನ್ನು ಕೇಳಿಕೊಂಡರು.

ಖ್ವಾಜಾ ಆಸ್ಟ್ರೇಲಿಯ ತಂಡದಲ್ಲಿರುವ  ಇಸ್ಲಾಂ ಧರ್ಮ ಪಾಲಿಸುವ ಆಟಗಾರರಾಗಿದ್ದಾರೆ. ಮದ್ಯವನ್ನು ಇಸ್ಲಾಂ ನಷೇಧಿಸಿದರುವ ಕಾರಣ ಅವರು ಅದರಿಂದ ದೂರ ಸರಿದು ನಿಂತಿದ್ದರು. ಈ ಹಿಂದೆ ಹಾಶಿಮ್‌ ಆಮ್ಲಾ, ಇಮ್ರಾನ್‌ ತಾಹಿರ್‌ ಸೇರಿದಂತೆ ಅನೇಕ ಮುಸ್ಲಿಂ ಆಟಗಾರರು ಇದೇ ರೀತಿ ನಡೆದುಕೊಂಡು ಬಂದಿದ್ದರು  ಟ್ರಾವಿಸ್ ಹೆಡ್ ಅವರ ಬದಲಿಯಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಖ್ವಾಜಾ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು. 

35 ವರ್ಷ ವಯಸ್ಸಿ ಖ್ವಾಜಾ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ ಗಳಲ್ಲಿ ಶತಕ ಬಾರಿಸಿದ ಮೂರನೇ ಆಟಗಾರನೆಂಬ ಕೀರ್ತಿಗೆ ಪಾತ್ರರಾದರು. ಖ್ವಾಜಾ  ಇಂಗ್ಲೆಂಡ್ ವಿರುದ್ಧ ಔಟಾಗದೆ 137 ಹಾಗೂ  101 ಸಿಡಿಸಿದ್ದರು. ಖ್ವಾಜಾ ಅವರು ಆ್ಯಶಸ್ ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಗಳಿಸಿದ ಆರನೇ ಆಸ್ಟ್ರೇಲಿಯನ್ ಬ್ಯಾಟ್ಸ್‌ ಮನ್ ಎನಿಸಿಕೊಂಡರು.

ಖ್ವಾಜಾ ಅವರ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ  ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧದ  ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಖ್ವಾಜಾ ಐದನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.  ಆದರೆ ನಾಲ್ಕನೇ ಪಂದ್ಯದಲ್ಲಿ ತೋರಿದ್ದ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲರಾದರು.

2021-22 ರ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 4-0 ಗೆಲುವಿಗೆ ನೇತೃತ್ವ ವಹಿಸಿದ್ದ ಪ್ಯಾಟ್ ಕಮಿನ್ಸ್ ರವಿವಾರ ತಮ್ಮ ಟೆಸ್ಟ್ ನಾಯಕತ್ವದ ವೃತ್ತಿಜೀವನಕ್ಕೆ ಅದ್ಭುತವಾದ ಆರಂಭವನ್ನು ಪಡೆದರು. ಟಿಮ್ ಪೈನ್ ರಾಜೀನಾಮೆಯಿಂದ ತೆರವಾದ ನಾಯಕನ ಸ್ಥಾನವನ್ನು ಯಶಸ್ವಿಯಾದ ತುಂಬಿದ ಕಮ್ಮಿನ್ಸ್ ಆಸ್ಟ್ರೇಲಿಯವು ಆ್ಯಶಸ್ ಕಪ್ ಉಳಿಸಿಕೊಳ್ಳಲು ನೆರವಾಗಿದ್ದಲ್ಲದೆ ಬೌಲಿಂಗ್ ನಲ್ಲಿ ಕೂಡ ಪ್ರಾಬಲ್ಯ ಮೆರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News