ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಇಲ್ಲ: ಸಚಿವ ಆರ್.ಅಶೋಕ್

Update: 2022-01-17 15:46 GMT

ಬೆಂಗಳೂರು:  ''ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಇಲ್ಲ'' ಎಂದು ಕಂದಾಯ ಸಚಿವ  ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವರ್ಚುವಲ್ ಮೂಲಕ ನಡೆದ ತಾಂತ್ರಿಕ ಸಲಹೆಗಾರರು, ಸಚಿವರ  ಸಭೆಯಲ್ಲಿ ಭಾಗವಹಿಸಿದ ಬಳಿಕ ಸಚಿವ ಆರ್.ಅಶೋಕ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 

''ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಅವಶ್ಯಕತೆ ಸದ್ಯಕ್ಕೆ ಇಲ್ಲ,  ಶುಕ್ರವಾರ ಮತ್ತೊಮ್ಮೆ ಸಭೆ ಸೇರಿ  ವಾರಾಂತ್ಯ , ರಾತ್ರಿ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೋಳ್ಳಲಿದ್ದೇವೆ'' ಎಂದು ತಿಳಿಸಿದರು. 

''ಮುಂದಿನ ಸಭೆಯಲ್ಲಿ ಸರಕಾರ ಜನರ ಪರವಾಗಿ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಶುಕ್ರವಾರದ ಹೊತ್ತಿಗೆ ಕೊರೋನ ಸೋಂಕು ಕಡಿಮೆಯಾದರೆ ಒಳ್ಳೇ ಸುದ್ದಿಯೇ ಬರಬಹುದು'' ಎಂದು ಹೇಳಿದರು. 

‘ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದು, ಶುಕ್ರವಾರ (ಜ.21)ದ ವರೆಗೆ ಪ್ರಸ್ತುತ ಮಾರ್ಗಸೂಚಿ ಜಾರಿಯಲ್ಲಿರಲಿದೆ. ಮುಂದಿನ ಪರಿಸ್ಥಿತಿ ಆಧರಿಸಿ ರಾತ್ರಿ ಮತ್ತು ವಾರಾಂತ್ಯದ ಕಫ್ರ್ಯೂ ಸಡಿಲಿಕೆ ಮಾಡಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಲಾಕ್‍ಡೌನ್ ಮಾಡುವ ಪ್ರಸ್ತಾವ ಸರಕಾರದ ಮುಂದಿಲ್ಲ'

-ಆರ್.ಅಶೋಕ್ ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News