​ಅರುಣಾಚಲ ಪ್ರದೇಶದಲ್ಲಿ ಭೂಕಂಪ

Update: 2022-01-18 03:06 GMT

ಬಸರ್ (ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ಬಸರ್‌ನಲ್ಲಿ ಮಂಗಳವಾರ ಮುಂಜಾನೆ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (ಎನ್‌ಸಿಎಸ್) ಪ್ರಕಟಿಸಿದೆ.

ಬಸರ್‌ನಿಂದ ನೈರುತ್ಯಕ್ಕೆ 148 ಕಿಲೋಮೀಟರ್ ದೂರದಲ್ಲಿ 10 ಅಡಿ ಆಳದಲ್ಲಿ ಭೂಕಂಪ ಸಂಭವಿಸಿದೆ. ಮುಂಜಾನೆ 4.30ರ ಸುಮಾರಿಗೆ ಜನತೆಗೆ ಕಂಪನದ ಅನುಭವವಾಯಿತು ಎಂದು ಎನ್‌ಸಿಎಸ್ ಹೇಳಿದೆ.

"18-01-2022ರಂದು ಮುಂಜಾನೆ 04.29.30ಕ್ಕೆ ಅಕ್ಷಾಂಶ 29.16 ಮತ್ತು ರೇಖಾಂಶ 93.97, 10 ಅಡಿ ಆಳದಲ್ಲಿ ಅರುಣಾಚಲ ಪ್ರದೇಶದ ಬಸರ್‌ನಿಂದ ಆಗ್ನೇಯಕ್ಕೆ 148 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ" ಎಂದು ಎನ್‌ಸಿಎಸ್ ಟ್ವೀಟ್ ಮಾಡಿದೆ.

ಯಾವುದೇ ಹಾನಿ ಅಥವಾ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News