×
Ad

ಪಿ. ಎ. ಪಾಲಿಟೆಕ್ನಿಕ್ ನಲ್ಲಿ “ಉದ್ಯಮಶೀಲತೆ ಅಭಿವೃದ್ಧಿ” ಕಾರ್ಯಾಗಾರ

Update: 2022-01-18 13:56 IST

ಕೋಣಾಜೆ : ಪಿ ಎ ಪಾಲಿಟೆಕ್ನಿಕ್ ನಲ್ಲಿ “ಉದ್ಯಮಶೀಲತೆ ಅಭಿವೃದ್ಧಿ” ಕಾರ್ಯಾಗಾರ, ಉಪಪ್ರಾಂಶುಪಾಲರಾದ ಪ್ರೋ. ಇಸ್ಮಾಯಿಲ್ ಖಾನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಸಯ್ಯದ್ ಅಮೀನ್‌ ಅಹ್ಮದ್‌ ವಿಷಯದ ಬಗ್ಗೆ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ವಿವಿಧ ಉದ್ಯೊಗಾವಕಾಶ ಹಾಗೂ ಅದರಲ್ಲಿ ಸಾಮಾಜಿಕ ಜಾಲತಾಣಗಳ ಉಪಯೋಗ ಕುರಿತಂತೆ ಮಾಹಿತಿ ನೀಡಿದರು.

ವಿಭಾಗ ಮುಖ್ಯಸ್ಥರಾದ ಪ್ರೊ. ಅಲಿ ಅಶ್ರಫ್ ರವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಾದ ನೌಶೀರ್  ಸ್ವಾಗತಿಸಿದರು, ಹರ್ಶ್ ಜೈನ್ ಸಂಪನ್ಮೂಲ ವ್ಯಕ್ತಿಗಳ ವ್ಯಕ್ತಿ ಪರಿಚಯ ಮಾಡಿಕೊಟ್ಟರು, ರಶ್ವೀರ್ ಕಾರ್ಯಕ್ರಮ ನಿರೂಪಿಸಿದರು, ಮೊನಿಷ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News