ಪೆಂಗೊಂಗ್ ಸರೋವರಕ್ಕೆ ಅಡ್ಡಲಾಗಿ ಭರದಿಂದ ಹೊಸ ಸೇತುವೆ ನಿರ್ಮಿಸುತ್ತಿರುವ ಚೀನಾ !

Update: 2022-01-18 18:05 GMT
Photo: Ndtv

ಹೊಸದಿಲ್ಲಿ,ಜ.18: ಪೂರ್ವ ಲಡಾಖ್ನ ಪ್ಯಾಂಗಾಂಗ್ ಸರೋವರಕ್ಕೆ ಅಡ್ಡವಾಗಿ ಚೀನಾ ಅಕ್ರಮವಾಗಿ ನಿರ್ಮಿಸುತ್ತಿರುವ ನೂತನ ಸೇತುವೆಯು ಈಗ 400 ಮೀ.ಗಿಂತಲೂ ಹೆಚ್ಚು ಉದ್ದವನ್ನು ಹೊಂದಿದ್ದು,ಸೇತುವೆಯು ಪೂರ್ಣಗೊಂಡ ಬಳಿಕ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯ ಕೇಂದ್ರಬಿಂದುವಾಗಿದ್ದ ಈ ಪ್ರದೇಶದಲ್ಲಿ ಚೀನಾಕ್ಕೆ ಮಹತ್ವದ ಮಿಲಿಟರಿ ಮೇಲುಗೈ ಒದಗಿಸಲಿದೆ.

8 ಮೀ.ಅಗಲವಿರುವ ಸೇತುವೆಯು ಪ್ಯಾಂಗಾಂಗ್ನ ಉತ್ತರ ದಂಡೆಯಲ್ಲಿರುವ ಚೀನಿ ಸೇನಾ ನೆಲೆಯ ದಕ್ಷಿಣದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸೇತುವೆಯ ಪಿಲ್ಲರ್ಗಳನ್ನು ಕಾಂಕ್ರೀಟ್ ಸ್ಲಾಬ್ಗಳೊಂದಿಗೆ ಜೋಡಿಸಲು ಚೀನಿ ನಿರ್ಮಾಣ ಕಾರ್ಮಿಕರು ಭಾರೀ ಕ್ರೇನ್ ಬಳಸುತ್ತಿರುವುದನ್ನು ಜ.16ರ ಉಪಗ್ರಹ ಚಿತ್ರಗಳು ತೋರಿಸಿವೆ. ಪ್ರದೇಶದಲ್ಲಿಯ ಚೀನಿ ಮಿಲಿಟರಿ ನೆಲೆಯಾದ ರುಟಾಗ್ಗೆ ಸಂಪರ್ಕ ರಸ್ತೆಯು ಪೂರ್ಣಗೊಳ್ಳಲು ತುಂಬ ಸಮಯ ಬೇಕಾಗಬಹುದಾದರೂ ನಿರ್ಮಾಣ ಕಾಮಗಾರಿಯ ವೇಗವನ್ನು ಪರಿಗಣಿಸಿದರೆ ಸೇತುವೆಯು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸೇತುವೆಯು ಸರೋವರದ ಎರಡೂ ದಂಡೆಗಳಿಗೆ ಸೈನಿಕರನ್ನು ತ್ವರಿತವಾಗಿ ಸಾಗಿಸಲು ಚೀನಿ ಸೇನೆಯನ್ನು ಸಮರ್ಥವಾಗಿಸಲಿದೆ.

ಉತ್ತರ ದಂಡೆಯಲ್ಲಿನ ಚೀನಿ ಸೈನಿಕರು ರುಟಾಗ್ನಲ್ಲಿಯ ಮಿಲಿಟರಿ ನೆಲೆಯನ್ನು ತಲುಪಲು ಸುಮಾರು 200 ಕಿ.ಮೀ.ಪ್ರಯಾಣಿಸುವ ಅಗತ್ಯವಿಲ್ಲ ಮತ್ತು ಪ್ರಯಾಣವು ಸುಮಾರು 150 ಕಿ.ಮೀ.ಗಳಷ್ಟು ಮೊಟಕುಗೊಳ್ಳಲಿದೆ.
1958ರಿಂದಲೂ ಚೀನಾದ ವಶದಲ್ಲಿರುವ ಭೂಪ್ರದೇಶದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆಯಾದರೂ,ಸೇತುವೆಯ ನಿರ್ಮಾಣವು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಭಾರತವು ಪರಿಗಣಿಸಿದೆ.
ವಾಸ್ತವ ನಿಯಂತ್ರಣ ರೇಖೆಯಾಗಬೇಕು ಎಂದು ಭಾರತವು ಪ್ರತಿಪಾದಿಸುತ್ತಿರುವ ಪ್ರದೇಶದಲ್ಲಿಯೇ ಈ ಸೇತುವೆಯು ನಿರ್ಮಾಣಗೊಳ್ಳುತ್ತಿದೆ ಎಂದು ಫೋರ್ಸ್ ಅನಾಲಿಸಿಸ್ನ ಮುಖ್ಯ ಮಿಲಿಟರಿ ವಿಶ್ಲೇಷಕ ಸಿಮ್ ಟಾಕ್ ತಿಳಿಸಿದರು.

ಕಳೆದ 60 ವರ್ಷಗಳಿಂದಲೂ ಚೀನಾ ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿರುವ ಪ್ರದೇಶದಲ್ಲಿ ಸೇತುವೆಯು ನಿರ್ಮಾಣಗೊಳ್ಳುತ್ತಿದೆ. ಇಂತಹ ಅತಿಕ್ರಮಣವನ್ನು ಭಾರತವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಚೀನಿ ನಿರ್ಮಾಣ ಚಟುವಟಿಕೆಗಳ ಮೇಲೆ ನಿಗಾಯಿರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News