ಕಾಂ.ಜ್ಯೋತಿಬಸು ಅವರ 12ನೇ ಸಂಸ್ಮರಣಾ ದಿನಾಚರಣೆ

Update: 2022-01-18 14:12 GMT

ಮಂಗಳೂರು, ಜ.18: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯುನಿಸ್ಟ್ ನಾಯಕ ಜ್ಯೋತಿಬಸು ಅವರ 12ನೇ ಸಂಸ್ಮರಣಾ ದಿನಾಚರಣೆಯು (ಬಂಗಾಳದ ಕೆಂಪು ಸೂರ್ಯ ಒಂದು ನೆನಪು) ನಗರದ ವಿಕಾಸ ಕಚೇರಿಯಲ್ಲಿ ಸೋಮವಾರ ನಡೆಯಿತು.

ಅನುಸ್ಮರಣಾ ಭಾಷಣಗೈದ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ಬಂಗಾಳದ ಅಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜ್ಯೋತಿಬಸು ತನ್ನ ಜೀವಿತದ ಕೊನೆಯ ಉಸಿರು ಇರುವವರೆಗೂ ಸಮಾಜದ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ್ದರು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ ಜ್ಯೋತಿ ಬಸು ವಾಪಸ್ ತಾಯ್ನೋಡಿಗೆ ಎಡಪಂಥೀಯ ಚಿಂತಕರಾಗಿ ಬಂದು ರೈತ, ಕಾರ್ಮಿಕರ ಆಶಾಕಿರಣವಾಗಿ ಹೊರಹೊಮ್ಮಿದರು. ಯೌವನದಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಬಂಗಾಳದ ವಿಧಾನಸಭೆಯಲ್ಲಿ ದುಡಿಯುವ ವರ್ಗದ ಧ್ವನಿಯಾಗಿ ಮೂಡಿದರು. ತಾನು ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲೂ ಜಯ ಗಳಿಸುವ ಮೂಲಕ ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದರು. 24 ವರ್ಷಗಳ ಕಾಲ ಬಂಗಾಳದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದರು ಎಂದರು.

ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಬಿ.ಎಂ.ಮಾಧವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಮಾತನಾಡಿದರು. ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಸಂತೋಷ್ ಬಜಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News