​ಶಾಲೆಗಳಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಡಿಎಚ್‌ಒ, ಡಿಡಿಪಿಐ ಮಾಹಿತಿ

Update: 2022-01-18 16:07 GMT

ಮಂಗಳೂರು, ಜ.18: ದ.ಕ.ಜಿಲ್ಲೆಯ ಶಾಲೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

*ಶಾಲೆಗಳಲ್ಲಿ 5ಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾದರೆ 1 ವಾರ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕು, ವಿದ್ಯಾರ್ಥಿಗಳಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಬೋಧನೆ ಮಾಡುವ ಬಗ್ಗೆ ಆಯ್ಕೆಯ ಸ್ವಾತಂತ್ರ ನೀಡಬೇಕು, ತರಗತಿಗಳನ್ನು ನಡೆಸುವ ಬಗ್ಗೆ ಪೋಷಕ ಮತ್ತು ಶಿಕ್ಷಕರ ಸಭೆ ಕರೆದು ಸೂಕ್ತ ಮಾಹಿತಿ ನೀಡಬೇಕು ಎಂದು ಡಿಎಚ್‌ಒ ತಿಳಿಸಿದ್ದಾರೆ.

*ಜಿಲ್ಲೆಯ ಯಾವುದೇ ವಿದ್ಯಾಸಂಸ್ಥೆಗಳಲ್ಲಿ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದರೆ ಅಂತಹ ವಿದ್ಯಾಸಂಸ್ಥೆಗಳನ್ನು ಒಂದು ವಾರಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಬೇಕು. ತರಗತಿಗೆ ಹಾಜರಾಗಲು ಆಸಕ್ತಿ ಹೊಂದದ ಅಥವಾ ಹಾಜರಾಗಲು ಅಸಮರ್ಥ ರಾಗುವ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳೊಂದಿಗೆ ಆನ್ ಲೈನ್ ತರಗತಿಗಳನ್ನು ವಿದ್ಯಾಸಂಸ್ಥೆಗಳು ಆಯೋಜಿಸಬೇಕು.

ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣ ಪೋಷಕರ ಸಭೆ ಕರೆದು ಶಾಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳು, ಮಕ್ಕಳ ಸುರಕ್ಷತೆಯ ಕುರಿತು ಹಾಗೂ ಪೋಷಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತುರ್ತುಕ್ರಮ ಕೈಗೊಳ್ಳಬೇಕು. ಈ ಸಭೆಯಲ್ಲಿ ವ್ಯಕ್ತವಾದ ಪೋಷಕರ ಅಭಿಪ್ರಾಯವನ್ನು ಗೌರವಿಸಿ ಮುಂದಿನ ಕ್ರಮದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ.21ರೊಳಗೆ ವರದಿ ನೀಡುವಂತೆ ಡಿಡಿಪಿಐ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News