ವಿದ್ಯಾರ್ಥಿಗಳು ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು: ಅಶೋಕ್ ಹಾರನಹಳ್ಳಿ

Update: 2022-01-19 15:48 GMT

ಬೆಂಗಳೂರು, ಜ. 19: `ಸರಕಾರದ ಸವಲತ್ತುಗಳ ಅವಕಾಶಕ್ಕೆ ಕಾಯದೆ ಸಮುದಾಯದಲ್ಲಿ ನಮ್ಮ ಪರಸ್ಪರ ಸಹಾಯದಿಂದ ಎಲ್ಲರ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಸ್ಪಂದಿಸಬೇಕು. ಮಕ್ಕಳಿಗೆ ನಾವು ತಮ್ಮ ಸ್ವಂತ ಶಕ್ತಿಯ ಮೇಲೆ ಮುಂದುವರೆಯುತ್ತೇವೆ ಎಂಬ ಆತ್ಮವಿಶ್ವಾಸ ಅವರಲ್ಲಿ ಇರಬೇಕು' ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ವಿತರಣೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಲ್ಯಾಪ್‍ಟಾಪ್‍ಗಳಿಂದ ಒಳ್ಳೆಯ ಟೆಕ್ನಾಲಜಿಯನ್ನು ಕಲಿಯಬೇಕು, ಉತ್ತಮ ವಿಧ್ಯಾಭಾಸಕ್ಕಾಗಿ ಉಪಯೋಗಿಸಬೇಕು ಎಂದರು.

ಹಾಗೆಯೇ ವೃದ್ಧಾಶ್ರಮ ಎಂಬುವ ಭಾವನೆಯನ್ನೆ ತೊಡೆದು ಮಕ್ಕಳು ಒಳ್ಳೆಯ ನಾಗರಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಕೋವಿಡ್ ಸಾಂಕ್ರಾಮಿಕದಂತಹ ಸಂದರ್ಭದಲ್ಲಿ ಲ್ಯಾಪ್‍ಟಾಪ್ ವಿತರಣೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News