ರಿಪಬ್ಲಿಕ್ ಟಿವಿಯಿಂದ ಎನ್‌ಡಿಟಿವಿ ವರದಿಯ ಕೃತಿಚೌರ್ಯ: ಹಿರಿಯ ಪತ್ರಕರ್ತ ವಿಷ್ಣು ಸೋಮ್

Update: 2022-01-20 06:51 GMT
ಹಿರಿಯ ಪತ್ರಕರ್ತ ವಿಷ್ಣು ಸೋಮ್ (Photo: Twitter/@VishnuNDTV)

ಹೊಸದಿಲ್ಲಿ: ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಮುಜುಗರ ಉಂಟು ಮಾಡುವ ಬೆಳವಣಿಗೆಯೊಂದರಲ್ಲಿ ಎನ್‌ಡಿಟಿವಿ ವಾಹಿನಿಯ ಹಿರಿಯ ಪತ್ರಕರ್ತ ವಿಷ್ಣು ಸೋಮ್ ಅವರು ರಿಪಬ್ಲಿಕ್ ಟಿವಿ ವಿರುದ್ಧ ಕೃತಿಚೌರ್ಯದ ಗಂಭೀರ ಆರೋಪ ಹೊರಿಸಿದ್ದಾರೆ.

ನನ್ನ ಮೂಲ ಪತ್ರಿಕೋದ್ಯಮವು, ಎತ್ತಿಕೊಂಡು, ಅಂಟಿಸಿ ನಂತರ ಬೈಲೈನ್ ಸಹಿತ ವರದಿ ಪ್ರಕಟಿಸಲು ರಿಪಬ್ಲಿಕ್ ಟಿವಿಗೆ ವೀಸಾ ಅಲ್ಲ ಎಂದು ಸೋಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

"ಪ್ರೀತಿಯ ರಿಪಬ್ಲಿಕ್, ನಿಮ್ಮ ತಥಾಕತಿತ ತೀಕ್ಷ್ಣ ಸ್ವಾತಂತ್ರ್ಯಕ್ಕಾಗಿ, ಚೀನಾದ ಪೆಂಗೊಂಗ್ ಸೇತುವೆ ಕುರಿತ ನಮ್ಮ ವರದಿಗಳ ಪೂರ್ಣ ಲೇಬಲ್ ಹೊಂದಿದ ಎನ್‌ಡಿಟಿವಿ ಫೋಟೋಗಳನ್ನು ಎಗರಿಸಲು ನೀವು ಒಂದು ಹಾದಿ ಖಂಡಿತ ಹೊಂದಿದ್ದೀರಿ. ನಂತರ ನಿಮ್ಮ ವರದಿಗಾರರಿಗೆ ಒಂದು ಬೈಲೈನ್ ಕೂಡ ದೊರಕುತ್ತದೆ. ಎಡಬದಿಯಲ್ಲಿ ನಮ್ಮ ಚಿತ್ರ, ಬಲಬದಿಯಲ್ಲಿ ಅದೇ ವರದಿಯನ್ನು ಭಟ್ಟಿಯಿಳಿಸಿರುವುದು,'' ಎಂದು ಸೋಮ್ ಬರೆದಿದ್ದಾರೆ.

ತಮ್ಮ ಪೋಸ್ಟ್ ನೊಂದಿಗೆ ಸೋಮ್ ಅವರು ಈ ವರದಿಯಲ್ಲಿ ಬೈಲೈನ್ ಇದ್ದ ಶಿವಾನಿ ಶರ್ಮ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಸೋಮ್ ಪ್ರಕಾರ ಅವರು ತಮ್ಮ ವರದಿಯ ಒಂದು ಲಿಂಕ್ ಅನ್ನು ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದ ವರದಿ ಮಾಡುವ ಪತ್ರಕರ್ತರ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದರು. ರಿಪಬ್ಲಿಕ್ ಟಿವಿ ಉದ್ಯೋಗಿ ಇದನ್ನು ನೋಡಿ ಕೃತಿಚೌರ್ಯ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

"ಚೀನಾಗೆ ಸಂಬಂಧಿಸಿದ ಉಪಗ್ರಹ ಚಿತ್ರಗಳ ಆಧಾರಿತ ನಮ್ಮ ಯಾವುದೇ ವರದಿಗಳು ಮತ್ತು ಚಿತ್ರಗಳನ್ನು ಹಾಗೆಯೇ ಇನ್ನೊಬ್ಬರಿಗೆ ಬಳಸಲು ಸಾಧ್ಯವಿಲ್ಲ. ಈ ವರದಿಗಳನ್ನು ಸಿದ್ಧಪಡಿಸುವ ಹಿಂದೆ ಸಾಕಷ್ಟು ಶ್ರಮವಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಬಹುದು, ಆದರೆ ಅವುಗಳನ್ನು ಎತ್ತಿಕೊಂಡು, ನಕಲಿಸಿ ನಂತರ ಬೈಲೈನ್‌ನೊಂದಿಗೆ ಪ್ರಕಟಿಸಲು ಅವುಗಳು ವೀಸಾ ಅಲ್ಲ,'' ಎಂದು ಸೋಮ್ ಬರೆದಿದ್ದಾರೆ.

ಈ ಕುರಿತಂತೆ ರಿಪಬ್ಲಿಕ್ ಟಿವಿ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News