ಗೋರಖ್‌ಪುರದಲ್ಲಿ ಸಿಎಂ ಆದಿತ್ಯನಾಥ್‌ ವಿರುದ್ಧ ಚಂದ್ರಶೇಖರ್ ಆಝಾದ್ ಸ್ಪರ್ಧೆ

Update: 2022-01-20 09:37 GMT

ಲಕ್ನೊ: ಆಝಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್ ವಿರುದ್ಧ ಸೆಣಸಲಿದ್ದಾರೆ.

ಜನವರಿ 18 ರಂದು, ಆಝಾದ್ ಸಮಾಜ ಪಕ್ಷವು ಯುಪಿ ವಿಧಾನಸಭಾ ಚುನಾವಣೆಯ ಆರಂಭಿಕ ಹಂತದ ಮತದಾನಕ್ಕಾಗಿ 33 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು

ಉತ್ತರ ಪ್ರದೇಶ ಚುನಾವಣೆಯಲ್ಲಿ ಆಝಾದ್ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಚಂದ್ರಶೇಖರ್ ಆಝಾದ್ ಹೇಳಿದ್ದಾರೆ.

ಯುಪಿ ವಿಧಾನಸಭಾ ಚುನಾವಣೆಯು ಆಝಾದ್ ಸಮಾಜ ಪಕ್ಷವು ಎರಡು ವರ್ಷಗಳ ಹಿಂದೆ ರಚನೆಯಾದ ನಂತರ ಹೋರಾಡುತ್ತಿರುವ ಎರಡನೇ ಪ್ರಮುಖ ಚುನಾವಣೆಯಾಗಿದೆ. 2020 ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅದು ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು.

ಸಾಕಷ್ಟು ಊಹಾಪೋಹಗಳ ನಂತರ ಫೆಬ್ರವರಿ 10 ರಿಂದ ಆರಂಭವಾಗಲಿರುವ ಮುಂಬರುವ ಚುನಾವಣೆಯಲ್ಲಿ  ಆದಿತ್ಯನಾಥ್ ಅವರನ್ನು ಅವರ ತವರು ಕ್ಷೇತ್ರವಾದ ಗೋರಖ್‌ಪುರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಸಿಎಂ  ಆದಿತ್ಯನಾಥ್ ಈ ಬಾರಿ ಅಯೋಧ್ಯೆ ಅಥವಾ ಮಥುರಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News