ಜ. 22: ಯಕ್ಷಗಾನ ಅಕಾಡಮಿಯ ಕೃತಿಗಳ ಬಿಡುಗಡೆ

Update: 2022-01-20 10:42 GMT

ಮಂಗಳೂರು, ಜ.20: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಕಟಿಸಿದ ಕೃತಿಗಳ ಬಿಡುಗಡೆ ಸಮಾರಂಭ ಜ.22ರಂದು ಪೂರ್ವಾಹ್ನ 10.30ಕ್ಕೆ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ಅಕಾಡೆಮಿ ಪ್ರಕಟಿಸಿದ ಕದ್ರಿ ನವನೀತ ಶೆಟ್ಟಿ ಸಂಪಾದಿಸಿದ ತುಳು ಯಕ್ಷಗಾನ ಪ್ರಸಂಗ ಸಂಪುಟ-7 ಪ್ರಸಂಗಗಳು, ಡಾ.ರಮಾನಂದ ಬನಾರಿಯವರು ಬರೆದ ಯಕ್ಷಗಾನ ಸಂವಾದ ಭೂಮಿಕೆ ಹಾಗೂ ಪ್ರೊ.ಎಂ.ಎ.ಹೆಗಡೆ ಮತ್ತು ಯೋಗೀಶ್ ರಾವ್ ಚಿಗುರುಪಾದೆ ಸಂಪಾದಿಸಿದ ಪಾರ್ತಿಸುಬ್ಬ-ಬದುಕು ಬರಹ ಕೃತಿಗಳು ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ ಎಂದವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ ಅವರು ವಹಿಸಲಿದ್ದುಘಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಘಿ.ಪಿ.ಎಸ್.ಯಡಪಡಿತ್ತಾಯ ಕೃತಿ ಬಿಡುಗಡೆಗೊಳಿಸುವರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ ಎಂದು ನವನೀತ ಶೆಟ್ಟಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿಯಕ್ಷಗಾನ ಅಕಾಡೆಮಿಯ ಸದಸ್ಯರಾದ ದಾಮೋದರ ಶೆಟ್ಟಿ, ಯೋಗೀಶ್ ರಾವ್ ಚಿಗುರುಪಾದೆ, ಕುಳಾಯಿ ಮಾಧವ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News