ಭಾರತದ ಮಾಜಿ ಫುಟ್ಬಾಲ್ ಆಟಗಾರ ಸುಭಾಶ್ ಭೌಮಿಕ್ ನಿಧನ

Update: 2022-01-22 05:14 GMT
Photo: twitter

ಮುಂಬೈ: ಭಾರತದ ಮಾಜಿ ಫುಟ್ಬಾಲ್ ಆಟಗಾರ ಸುಭಾಶ್  ಭೌಮಿಕ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ವೈದ್ಯಕೀಯ ಸಂಸ್ಥೆಯ ಮೂಲಗಳು ತಿಳಿಸಿವೆ.

‘ಬೊಂಬೋಲ್ಡಾ’ ಎಂದೇ ಪ್ರಸಿದ್ಧರಾದ ಭೌಮಿಕ್ (72 ವರ್ಷ) ಅವರು ಮಧುಮೇಹ ಸಮಸ್ಯೆ ಹಾಗೂ ಮೂತ್ರಪಿಂಡದ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಶನಿವಾರ ಮುಂಜಾನೆ 3.30 ರ ಸುಮಾರಿಗೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ಭೌಮಿಕ್ ಸ್ಟ್ರೈಕರ್ ಆಗಿದ್ದರು ಹಾಗೂ  ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ಪರ ಆಡಿದ್ದರು. ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಭೌಮಿಕ್ ಅವರು ಯಶಸ್ವಿ ಫುಟ್ಬಾಲ್ ತರಬೇತುದಾರರಾಗಿದ್ದರು ಮತ್ತು ಈಸ್ಟ್ ಬೆಂಗಾಲ್, ಮೋಹನ್ ಬಗಾನ್, ಮೊಹಮ್ಮದನ್ ಸ್ಪೋರ್ಟಿಂಗ್, ಸಲ್ಗೋಕರ್ ಮತ್ತು ಚರ್ಚಿಲ್ ಬ್ರದರ್ಸ್‌ನಂತಹ ಕ್ಲಬ್‌ಗಳಿಗೆ ತರಬೇತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News