ಈ ವರ್ಷದ ಐಪಿಎಲ್‌ ದಿನಾಂಕವನ್ನು ಘೋಷಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ

Update: 2022-01-22 16:42 GMT

 ಹೊಸದಿಲ್ಲಿ, ಜ.22: ಈ ವರ್ಷದ ಐಪಿಎಲ್ ಟ್ವೆಂಟಿ-20 ಟೂರ್ನಿಯು ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಲಿದ್ದು, ಮೇ ತಿಂಗಳಲ್ಲಿ ಅಂತ್ಯವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಶನಿವಾರ ದೃಢಪಡಿಸಿದರು.

 ‘‘15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ಅಂತ್ಯದ ತನಕ ಇರಲಿದೆ ಎಂದು ಖಚಿತಪಡಿಸಲು ನನಗೆ ಖುಷಿಯಾಗುತ್ತಿದೆ. ಭಾರತದಲ್ಲಿ ಟೂರ್ನಿ ನಡೆಸಬೇಕೆಂದು ತಂಡದ ಬಹುತೇಕ ತಂಡದ ಮಾಲಿಕರು ಒತ್ತಾಯಿಸಿದ್ದಾರೆ. 2 ಹೊಸ ತಂಡಗಳಾದ ಅಹಮದಾಬಾದ್ ಹಾಗೂ ಲಕ್ನೊಗಳೊಂದಿಗೆ 2022ರ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಬಯಸಿದೆ’’ಎಂದು ಶಾ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದರು.

‘‘ಬಿಸಿಸಿಐ ಈ ಹಿಂದೆ ತನ್ನ ಪಾಲುದಾರರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ರಾಜಿ ಮಾಡಿಕೊಂಡಿಲ್ಲ. ಕೋವಿಡ್-19 ಹೊಸ ತಳಿ ಒಮೈಕ್ರಾನ್ ಕಾಣಿಸಿಕೊಂಡ ಬಳಿಕ ‘ಬಿ' ಯೋಜನೆ ಕಾರ್ಯರೂಪದಲ್ಲಿ ಇರಿಸಿದ್ದೇವೆ. ಮೆಗಾ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ಫೆ.12 ಹಾಗೂ 13ರಂದು ಬೆಂಗಳೂರಿನಲ್ಲಿ ನಿಗದಿಯಾಗಿದೆ. ಅದಕ್ಕೂ ಮೊದಲು ನಾವು ಪಂದ್ಯ ನಡೆಯುವ ಸ್ಥಳಗಳತ್ತ ಗಮನಹರಿಸುತ್ತೇವೆ’’ ಎಂದು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News