ಮಂಗಳೂರು ಹಜ್ ಭವನ; ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ
Update: 2022-01-23 22:03 IST
ಮಂಗಳೂರು, ಜ.23: ಮಂಗಳೂರು ಹಜ್ ಭವನ ನಿರ್ಮಾಣಕ್ಕೆ ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರು ಕಡೆ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಅವರು ರವಿವಾರ ಸ್ಥಳ ಪರಿಶೀಲನೆ ನಡೆಸಿದರು.
ಬಜ್ಪೆ ಎಂಜೆಎಂ ಸಮಿತಿಯ ಅಧೀನದ ಒಂದುವರೆ ಎಕರೆ ಜಾಗ, ಕರಂಬಾರು ಮತ್ತು ಮರವೂರಿನ ಇನ್ನೆರಡು ಜಮೀನನ್ನು ವೀಕ್ಷಿಸಿದ ಶಾಫಿ ಸಅದಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮತ್ತಿತರರ ಜೊತೆ ಸಮಾಲೋಚಿಸಿ ಶೀಘ್ರ ಹಜ್ ಭವನದ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದರು.
ಈ ಸಂದರ್ಭ ರಾಜ್ಯ ಹಜ್ ಸಮಿತಿ ಸದಸ್ಯ ಹನೀಫ್ ನಿಝಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಬಜ್ಪೆ ಎಂಜೆಎಂ ಅಧ್ಯಕ್ಷ ಬಿ. ಅಬ್ದುಲ್ ಕಾದರ್, ಕಾರ್ಯದರ್ಶಿ ಹುಸೈನ್ ಸಿರಾಜ್ ಮತ್ತು ಬಜ್ಪೆಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಶಾಫಿ ಸಅದಿ ಅವರನ್ನು ಬಜ್ಪೆಜಮಾಅತ್ ಆಡಳಿತ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.