×
Ad

ಮುಡಿಪು ಮೆಡಿಕಲ್ ಮಾಲಕಿಯ ದ್ವಿಚಕ್ರ ವಾಹನಕ್ಕೆ16 ಕೇಸ್, ಸಾವಿರಾರು ರೂ. ದಂಡ !

Update: 2022-01-24 12:43 IST
ಮೆಡಿಕಲ್ ಎದುರುಗಡೆ ನಿಲ್ಲಿಸಿದ ದ್ವಿಚಕ್ರ ವಾಹನಕ್ಕೆ

ಕೊಣಾಜೆ : ಮುಡಿಪು ಜಂಕ್ಷನ್‌ನಲ್ಲಿ ಕಾರ್ಯಾಚರಿಸುತ್ತಿರುವ ಮೆಡಿಕಲ್ ಶಾಪ್‌ವೊಂದರ ಮಾಲಕಿಯ ದ್ವಿಚಕ್ರ ವಾಹನಕ್ಕೆ ಪೊಲೀಸರು ಒಂದು ವರ್ಷದಲ್ಲಿ 16 ಕೇಸ್ ದಾಖಲಿಸಿ, ಸಾವಿರಾರು ರೂ. ದಂಡ ವಿಧಿಸಿದ್ದಾರೆ ಎಂದು ಆರೋಪಿಸಿರುವ ಮಹಿಳೆಯು ದಂಡದ ನೋಟಿಸನ್ನು ಮೆಡಿಕಲ್‌ ಶಾಪ್‌ನಲ್ಲಿ ಜೋಡಿಸಿಟ್ಟಿರುವುದು ವರದಿಯಾಗಿದೆ.

ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮೆಡಿಕಲ್ ಎದುರುಗಡೆ ನಿಲ್ಲಿಸಿದ ದ್ವಿಚಕ್ರ ವಾಹನಕ್ಕೆ 9,000 ರೂ. ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಡಿಪುವಿನಲ್ಲಿ ಕಳೆದ ವರ್ಷದ ಆರಂಭದಲ್ಲಿ ನನ್ನನ್ನು ತಡೆದ ಟ್ರಾಫಿಕ್ ಪೊಲೀಸರು ನಿಮ್ಮ ಸ್ಕೂಟರ್ ವಿರುದ್ಧ 5,000 ರೂ. ದಂಡ ಬಾಕಿ ಇದೆ ಎಂದು ತಿಳಿಸಿದ್ದರು. ದಂಡ ಪ್ರಯೋಗದ ಮಾಹಿತಿಯೇ ಇಲ್ಲದ ತನಗೇಕೆ ದಂಡ ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರವನ್ನ ಟ್ರಾಫಿಕ್ ಪೊಲೀಸರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ತಿಂಗಳಿಗೆ 500 ರೂ. ಮತ್ತು 1,000 ರೂ. ದಂಡ ಪ್ರಯೋಗದ ಎರಡು ನೋಟಿಸುಗಳು ಬರಲಾರಂಭಿಸಿದ್ದು ಈವರೆಗೆ 16 ನೋಟಿಸುಗಳು ಬಂದಿದ್ದು, ಅವೆಲ್ಲವನ್ನ ಶ್ರೀಮತಿ ತನ್ನ ಮೆಡಿಕಲ್ ಎದುರುಗಡೆ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ.

''ಪೊಲೀಸರು ದಾಖಲೆಗಳಿಲ್ಲದೆ ಕೇಸ್‌ ಹಾಕಲು ಸಾಧ್ಯವಿಲ್ಲ. ಮಹಿಳೆಯು ಈ ಬಗ್ಗೆ ಯಾವುದಾದರೂ ಗೊಂದಲಗಳಿದ್ದರೆ ಪರಿಶೀಲಿಸಿಕೊಳ್ಳಬಹುದು''.
- ನಟರಾಜ್, ಎಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News