ಸಯ್ಯದ್ ಫತೀನ್‌ ಅಹಮ್ಮದ್, ಅಭಿನವ್‌ ಕುಮಾರ್‌ಗೆ ರಾಷ್ಟೀಯ ಬಾಲ ಪುರಸ್ಕಾರ

Update: 2022-01-24 15:54 GMT

ಬೆಂಗಳೂರು, ಜ.24: ನಗರದ ಜಿ.ಪಿ.ನಗರದಲ್ಲಿರುವ ಸಂವೇದ್ ಶಾಲೆಯ ಎಂಟನೆ ತರಗತಿ ವಿದ್ಯಾರ್ಥಿ ಸಯ್ಯದ್ ಫತೀನ್ ಅಹಮದ್ ಹಾಗೂ ಜವಹಾರ್ ನವೋದಯ ಶಾಲೆಯ 12ನೇ ತರಗತಿ ವಿದ್ಯಾರ್ಥಿ ಅಭಿನವ್‌ ಕುಮಾರ್ ಚೌದರಿ ಈ ವರ್ಷದ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.  

ಸಯ್ಯದ್ ಫತೀನ್ ಅಹಮದ್ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ. ಹಾಗೆಯೇ ಪಿಯಾನೋ ವಾದಕರಾಗಿದ್ದಾರೆ. ಅಭಿನವ್‌ ಕುಮಾರ್ ಚೌದರಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪುಸ್ತಕಗಳ ಮರುಬಳಕೆ ಸೇರಿದಂತೆ ವಿದ್ಯಾರ್ಥಿಗಳಿಗೆ ರೂಪಿಸುವ ಯೋಜನೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಹಾಗೆಯೇ ರೈಸ್ ಸ್ಕಾಲರ್‌ಶಿಪ್ ಅಡಿ 1000 ಡಾಲರ್ ಹಣವನ್ನು ತಮ್ಮ ಕ್ರೂಸ್ ಸಂಸ್ಥೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರದಂದು ಬೆಂಗಳೂರು ನಗರಜಿಲ್ಲೆಯ ಕಚೇರಿಯಲ್ಲಿ ನಡೆದ ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಕೆಯ ಸಚಿವೆ ಸ್ಮೃತಿ ಇರಾನಿ ಹಾಗೂ ಬೆಂಗಳೂರು ನಗರಜಿಲ್ಲೆಯ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪುರಸ್ಕೃತರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News