ಹೋಮ್ ಐಸೋಲೇಷನ್ ಬಳಿಕ ನೆಗಟೀವ್ ವರದಿ ಕಡ್ಡಾಯವಲ್ಲ: ಗೌರವ್ ಗುಪ್ತಾ

Update: 2022-01-24 18:08 GMT

ಬೆಂಗಳೂರು, ಜ.24: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುವ ಹೋಮ್ ಐಸೋಲೇಷನ್ ಮುಗಿಸಿದ ಬಳಿಕ ಕೋವಿಡ್ ನೆಗಟೀವ್ ಡಿಜಿಟಲ್ ಸರ್ಟಿಫಿಕೇಟ್ ಕಡ್ಡಾಯವಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟೀವ್ ಬಂದವರು 7 ದಿನಗಳು ಹೋಮ್ ಐಸೋಲೇಷನ್‌ನಲ್ಲಿರಬೇಕು. ಐಸೋಲೇಷನ್ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿದ್ದಲ್ಲಿ ಯಾವುದೇ ರೀತಿಯ ನೆಗಟೀವ್ ಸರ್ಟಿಫೀಕೆಟ್‌ನ ಅವಶ್ಯಕತೆ ಇರುವುದಿಲ್ಲ. ಆದರೆ ಸೋಂಕಿನ ಲಕ್ಷಣಗಳು ಇದ್ದಲ್ಲಿ ಇನ್ನು ಸ್ಪಲ್ಪ ದಿನ ಹೋಮ್ ಐಸೋಲೇಷನ್‌ನಲ್ಲಿ ಇರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. 

ಹೋಮ್ ಐಸೋಲೇಷನ್‌ನಲ್ಲಿದ್ದವರು ಸಾರ್ವಜನಿಕ ತಪಾಸಣೆ ವೇಳೆ 7 ದಿನಗಳ ಹಿಂದಿನ ಕೋವಿಡ್ ಪಾಸಿಟೀವ್ ವರದಿಯನ್ನು ತೋರಿಸಿ ಹೋಮ್ ಐಸೋಲೇಷನ್‌ನಲ್ಲಿರುವುದರ ಕುರಿತು ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.  

ಮೃತಪಟ್ಟ ವ್ಯಕ್ತಿಗೆ ಲಸಿಕೆ ಹಾಕಿಸಿದೆಯೇ ಎಂಬ ಮೊಬೈಲ್ ಸಂದೇಶಗಳಿಗೂ ಪಾಲಿಕೆಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News