ಮಲಾರ್: ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ, ಮಗ ನಿಧನ
Update: 2022-01-25 20:22 IST
ಮಂಗಳೂರು, ಜ.25: ಪಾವೂರು ಗ್ರಾಮದ ಮಲಾರ್ ಪದವು ಎಂಬಲ್ಲಿ ವಾಸವಾಗಿದ್ದ ತಾಯಿ ಮತ್ತು ಮಗ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾಗಿದ್ದಾರೆ.
ಅಹ್ಮದ್ ಬಾವಾ ಯಾನೆ ಮುಹಮ್ಮದ್ ಬಾವಾ (62) ಸೋಮವಾರ ಸಂಜೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು.
ಮೃತರು ಪತ್ನಿ ಮತ್ತು ಐದು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಹ್ಮದ್ ಬಾವಾ ಅವರ ತಾಯಿ ಮರಿಯಮ್ಮ (95) ಮಂಗಳವಾರ ಮುಂಜಾವ ನಿಧನರಾಗಿದ್ದಾರೆ. ಮರಿಯಮ್ಮ ಅವರಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯಿದ್ದರು. ಮರಿಯಮ್ಮ ತನ್ನ ಏಕೈಕ ಪುತ್ರ ಅಹ್ಮದ್ ಬಾವಾರ ಮನೆಯಲ್ಲೇ ವಾಸವಾಗಿದ್ದರು. ಮೂರು ದಿನಗಳಿಂದ ಅಸೌಖ್ಯದಿಂದಿದ್ದ ಮರಿಯಮ್ಮರಿಗೆ ಪುತ್ರ ನಿಧನ ಹೊಂದಿರುವುದು ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಅಹ್ಮದ್ ಬಾವಾ ಅವರನ್ನು ಸೋಮವಾರ ರಾತ್ರಿ ಮತ್ತು ಮರಿಯಮ್ಮ ಅವರನ್ನು ಮಂಗಳವಾರ ಮಧ್ಯಾಹ್ನ ಮಲಾರ್ ಬದ್ರಿಯಾ ನಗರದ ಬದ್ರಿಯಾ ಜುಮಾ ಮಸ್ಜಿದ್ ಬಳಿ ದಫನ ಮಾಡಲಾಯಿತು.