ಕೊಡಿಯಾಲ್ ಬೈಲ್; ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ತೊಂದರೆ: ಸಾರ್ವಜನಿಕರ ಆರೋಪ
Update: 2022-01-25 22:29 IST
ಮಂಗಳೂರು, ಜ.25: ನಗರದ ಕೊಡಿಯಾಲ್‌ಬೈಲ್ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಯಡಿ ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ಕಾಮಾಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕೇಳಿ ಬಂದ ದೂರಿನ ಮೇರೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಭಾಗದ ಮನೆ, ಅಂಗಡಿಗಳ ಮಧ್ಯೆದಲ್ಲಿಯೇ ಕೆಲಸ ನಡೆಯುತ್ತಿರುವುದರಿಂದ ಮತ್ತು ಸ್ಥಳೀಯ ಮನೆಗಳಿಗೆ ಹೋಗುವ ದಾರಿ, ವಿದ್ಯುತ್, ನೀರು ಸರಬರಾಜಿಗೆ ತೊಂದರೆಯಾಗಿದೆ. ಅಲ್ಲದೆ ಮನೆ, ಅಂಗಡಿ ಮುಂಗಟ್ಟುಗಲು ಧೂಳಿನಿಂದ ಆವೃತ್ತವಾದ ಕಾರಣ ಹಲವರಿಗೆ ಆರೋಗ್ಯದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿಕೊಂಡರು.
ಶೀಘ್ರ ಈ ಪ್ರದೇಶದ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಐವನ್ ಡಿಸೋಜ ಮನಪಾ ಆಯುಕ್ತರು, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕರಿಗೆ ಮನವಿ ಮಾಡಿದರು. ಈ ಸಂದರ್ಭ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಆನಂದ ಸೋನ್ಸ್, ಆಲಿಸ್ಟನ್ ಡಿಕುನ್ಹಾ ಮತ್ತಿತರು ಉಪಸ್ಥಿತರಿದ್ದರು.