ರಾಜ್ ಪಥ್ ನಲ್ಲಿ ಗಣರಾಜ್ಯೋತ್ಸವ ಪರೇಡ್: ಗಮನ ಸೆಳೆದ ಕರ್ನಾಟಕದ 16 ಕರಕುಶಲವಸ್ತುಗಳ ಸ್ತಬ್ದಚಿತ್ರ

Update: 2022-01-26 07:27 GMT
Photo: Twitter/@mygovindia

ಹೊಸದಿಲ್ಲಿ: ತನ್ನ ಮಿಲಿಟರಿ ಪರಾಕ್ರಮ ಹಾಗೂ  ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುವ ಮೂಲಕ ಭಾರತವು ಇಂದು ತನ್ನ 73ನೇ ಗಣರಾಜ್ಯೋತ್ಸವವನ್ನು ದಿಲ್ಲಿಯ ರಾಜ್‌ಪಥ್‌ನಲ್ಲಿ ವಾರ್ಷಿಕ ಪರೇಡ್‌ನೊಂದಿಗೆ ಆಚರಿಸಿತು. ರಾಷ್ಟ್ರಪತಿ ರಾಮನಾಥ ಕೋವಿಂದ್  ಪರೇಡ್ ಗೆ ಚಾಲನೆ ನೀಡಿದ್ದು, ಭಾರತದ ಸೇನಾ ಶಕ್ತಿ ಪ್ರದರ್ಶನವಾಯಿತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸ್ತಬ್ದ ಚಿತ್ರಗಳು ರಾಜ್ ಪಥದಲ್ಲಿ ಗಮನ ಸೆಳೆದವು.

ಕರ್ನಾಟಕದ 16 ಕರಕುಶಲವಸ್ತುಗಳ ಸ್ತಬ್ದಚಿತ್ರ ಗಮನ ಸೆಳೆಯಿತು. ಇದು ದಕ್ಷಿಣ ಭಾರತದ ಏಕೈಕ ಸ್ತಬ್ದಚಿತ್ರವಾಗಿತ್ತು.

75 ವಿಮಾನಗಳು ಹಾಗೂ  ಹೆಲಿಕಾಪ್ಟರ್‌ಗಳ ಫ್ಲೈಪಾಸ್ಟ್ ಈ ವರ್ಷದ ಮೆರವಣಿಗೆಯ ಪ್ರಮುಖ ಅಂಶವಾಗಿದೆ.

ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯ ಮೂಲಕ ಆಯ್ಕೆಯಾದ ಸುಮಾರು 480 ನೃತ್ಯಗಾರರು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಟ್ವೀಟ್ ಮಾಡುವ ಮೂಲಕ ರಾಷ್ಟ್ರಕ್ಕೆ ಶುಭಾಶಯ ಕೋರಿದ್ದಾರೆ, "ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್!" ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News