ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಗಣರಾಜ್ಯೋತ್ಸವ

Update: 2022-01-26 16:57 GMT

ಮಂಗಳೂರು: ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಕಂಕನಾಡಿಯ ಸಂಸ್ಥೆಯ ಆವರಣ ದಲ್ಲಿಂದು ಗಣರಾಜ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಗಣರಾಜ್ಯ ದಿನದ ಶುಭಾಶಯ ತಿಳಿಸುತ್ತಾ ಮುಂದಿನ ಯುವ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ, ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕು. ಗಿಡ, ಮರಗಳ ಸಂರಕ್ಷಣೆ ಪ್ರತಿಯೊಬ್ಬನ ಹೊಣೆಗಾರಿಕೆಯಾಗಬೇಕು ಎಂದರು.

ಪತ್ರಕರ್ತ ಪುಷ್ಪರಾಜ್.ಬಿ.ಎನ್, ಮಾತನಾಡುತ್ತಾ ದೇಶದ ಗಣತಂತ್ರ ದಿನದಂದು ದೇಶದ ಸಂವಿಧಾನ ಮಹತ್ವದ ಬಗ್ಗೆ ನೆನಪಿಸಿಕೊಳ್ಳಬೇಕಾಗಿದೆ. ಸಂವಿಧಾನ ದೇಶದ ಬಹುಮುಖಿ ಸಮಾಜದ ಎಲ್ಲಾ ಜನರು ಸ್ವಾಭಿಮಾನದೊಂದಿಗೆ ಬದುಕುವ  ಅವಕಾಶವನ್ನು ನೀಡಿದೆ. ಸಂವಿಧಾನದ ಮೌಲ್ಯಗಳು ಜನತೆಗೆ ಸಮರ್ಪಕವಾಗಿ ತಲುಪಬೇಕಾದರೆ ಅದು ಯಾವ ರೀತಿ ಅನುಷ್ಠಾನಗೊಳ್ಳುತ್ತಿದೆ ಎನ್ನುವುದು ಮುಖ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ 'ಮಿಫ್' ಅಧ್ಯಕ್ಷ  ಮೂಸಬ್ಬ ಬ್ಯಾರಿ, ದೇಶದ ಜಾತ್ಯತೀತ ಮೌಲ್ಯಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಮ್ಮಿಕೊಂಡಿರುವ ಗಣರಾಜ್ಯ ದಿನಾಚರಣೆ ಅರ್ಥ ಪೂರ್ಣವಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಅಧ್ಯಕ್ಷ ರಿಯಾಝ್ ಅಹ್ಮದ್ ವಹಿಸಿ ಶುಭ ಹಾರೈಸಿದರು. ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಅತಿಥಿಗಳು ಸಾಮೂಹಿಕವಾಗಿ ಧ್ವಜಾರೋಹಣ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News