ಸಿದ್ದಮೂಲೆ ದಲಿತ ಮನೆಗಳಿಗೆ ನೀರು, ಶೌಚಾಲಯಕ್ಕೆ ಆಗ್ರಹ; ಜ.31ರಂದು ಗ್ರಾಪಂ ಮುಂಭಾಗ ಪ್ರತಿಭಟನೆ

Update: 2022-01-27 15:32 GMT

ಪುತ್ತೂರು: ತಾಲೂಕಿನ ಕೊಳ್ತಿಗೆ ಗ್ರಾಮದ ಸಿದ್ದಮೂಲೆ ಕೆಮ್ಮಾರ ಎಂಬಲ್ಲಿನ 6 ದಲಿತ ಕುಟುಂಬಗಳ ಮನೆಗಳಿಗೆ ನಳ್ಳಿ ನೀರು ಸಂಪರ್ಕ ಹಾಗೂ ಶೌಚಾಲಯವನ್ನು ತಕ್ಷಣವೇ ನಿರ್ಮಿಸಿಕೊಡುವಂತೆ ಆಗ್ರಹಿಸಿ ಜ.31ರಂದು ಕೊಳ್ತಿಗೆ ಗ್ರಾಪಂ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಿದ್ದಮೂಲೆ ಕೆಮ್ಮಾರದ ದಲಿತ ಕುಟುಂಬಗಳು ಕುಡಿಯಲು ಕಲುಶಿತ ಕೆರೆಯ ನೀರನ್ನು ಬಳಸುತ್ತಿದ್ದಾರೆ. ಅಲ್ಲದೆ ಶೌಚಾಲಯವಿಲ್ಲದ ಬಯಲು ಶೌಚವನ್ನು ಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ದಲಿತ ಕುಟುಂಬಗಳು ಶುದ್ದ ಕುಡಿಯುವ ನೀರು ಮತ್ತು ಶೌಚಾಲಯವಿಲ್ಲದೆ ಬದುಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ರೋಗಗಳು ಹರಡುವ ಅಪಾಯವಿದ್ದು, ಪಂಚಾಯತ್ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಹಾಗೂ ತಕ್ಷಣವೇ ಅವರಿಗೆ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News