×
Ad

ಬೆಂಗಳೂರು: ಖೋಟಾನೋಟು ತೋರಿಸಿ ವಂಚನೆ; ನಾಲ್ವರು ಆರೋಪಿಗಳ ಬಂಧನ

Update: 2022-01-29 19:45 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.29: ಖೋಟಾನೋಟು ತೋರಿಸಿ ವಂಚನೆ ಮಾಡುತ್ತಿದ್ದ ನಾಲ್ವರು ಅಂತರ್‍ರಾಜ್ಯ ಕಳ್ಳರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ನಟರಾಜನ್, ಬಾಲಾಜಿ, ವೆಂಕಟೇಶ ಹಾಗೂ ರಾಕೇಶ ಎಂದು ಗುರುತಿಸಲಾಗಿದೆ. ಬಂಧಿತರು ಮಕ್ಕಳ ಆಟಿಕೆ ನೋಟು ತೋರಿಸಿ ಹಣ ಮೂರು ಪಟ್ಟು ಮಾಡಿಕೊಡುವುದಾಗಿ ವಂಚಿಸುತ್ತಿದ್ದರು ಎಂದು ಡಿಸಿಪಿ ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ. ಸಾವಿರ ಕೂಟ್ಟರೆ ಮೂರು ಸಾವಿರ ಕೊಡುವುದಾಗಿ ಮಕ್ಕಳ ಅಟಿಕೆ ನೋಟು ತೋರಿಸಿ ಆರೋಪಿಗಳು ವಂಚನೆ ನಡೆಸುತ್ತಿದ್ದರು ಎನ್ನಲಾಗಿದೆ.

ಬಂಧಿತರಿಂದ 5.85 ಲಕ್ಷ ರೂ. ಮೌಲ್ಯದ ನಗದು, 80 ಗ್ರಾಂ ಚಿನ್ನಾಭರಣ, 20 ಕೋಟಿ ಮಕ್ಕಳ ನೋಟುಗಳು, 10 ಬಂಗಾರದ ನಕಲಿ ಗೋಲ್ಡ್ ಬಿಸ್ಕೆಟ್ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರನ್ನು ವಶಕ್ಕೆ ತೆಗೆದುಕೊಂಡದ್ದು, ಹೆಚ್ಚಿನ ತನಿಖೆ ಗೊಳ್ಳಲಾಗಿದೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News