×
Ad

ಸಮಾಜದಲ್ಲಿರುವ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವುದು ಮುಸ್ಲಿಮರ ಕರ್ತವ್ಯ: ಅಝೀಝ್ ದಾರಿಮಿ ಕೊಡಾಜೆ

Update: 2022-01-29 21:55 IST

ವಿಟ್ಲ: ನಮಾಝ್, ಉಪವಾಸ ಮಾತ್ರ ಮುಸ್ಲಿಮನಾದವನ ಕೆಲಸವಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವುದು ಕೂಡಾ ಮುಸ್ಲಿಮರ ಕರ್ತವ್ಯವಾಗಿದೆ ಎಂದು ಕೊಡಾಜೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

ಕೊಡಾಜೆ ಸುಲ್ತಾನ್ ಕಾಂಪ್ಲೆಕ್ಸ್ ನಲ್ಲಿ ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಇದರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೋಶಿಯಲ್ ಇಖ್ವಾ ಫೆಡರೇಶನ್ ಸಂಘಟನೆಯು ಆ್ಯಂಬುಲೆನ್ಸ್ ಒಂದನ್ನು ಸಮಾಜಕ್ಕೆ ಈಗಾಗಲೇ ಅರ್ಪಿಸಿದ್ದು, ಮಾಣಿ ಸುತ್ತಮುತ್ತಲಿನ 8 ಗ್ರಾಮಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮುದಾಯ ಸಬಲೀಕರಣದ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಕಾರ್ಯಾಚರಿಸುವ ಮೂಲಕ  ಜನರಿಗೆ ಸಹಕಾರಿಯಾಗಲಿ ಎಂದು ಆಶಿಸಿದರು.

ಫೆಡರೇಶನ್ ಗೌರವ ಸಲಹೆಗಾರ ಹನೀಫ್ ಖಾನ್ ಕೊಡಾಜೆ ಸಂಘಟನೆಯ ಮುಂದಿನ ಕಾರ್ಯಯೋಜನೆ, ಗುರಿಗಳ ಬಗ್ಗೆ ವಿವರಿಸಿದರು.

ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು. ಕೊಡಾಜೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್, ಉದ್ಯಮಿ ಅಹಮದ್ ಖಾನ್ ಕೊಡಾಜೆ, ಫೆಡರೇಶನ್ ಗೌರವ ಸಲಹೆಗಾರ ಹಾಜಿ ರಫೀಕ್ ಸುಲ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹಾಜಿ ಅಬ್ದುಲ್ ಖಾದರ್ ಸುಲ್ತಾನ್, ಬಾಶಿತ್ ಬುಡೋಳಿ, ರಶೀದ್ ನೀರಪಾದೆ, ಇಂಜಿನಿಯರ್ ಲತೀಫ್ ಕೊಡಾಜೆ, ಇಂಜಿನಿಯರ್ ನವಾಝ್ ನೇರಳಕಟ್ಟೆ, ಫಾರೂಕ್ ಗೋಳಿಕಟ್ಟೆ, ಸಿದ್ದೀಕ್ ನೆಡ್ಯಾಲು, ಬಶೀರ್ ಕೊಡಾಜೆ, ರಫೀಕ್ ಯುನೈನ್, ಅಶ್ರಫ್ ಮನೋಹರ್ ಮಾಣಿ, ಶಬ್ಬೀರ್ ಖಾನ್ ಕಡೇಶ್ವಾಲ್ಯ, ಅತಾವುಲ್ಲಾ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. 

ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ನಿರೂಪಿಸಿದರು. ಉಪಾಧ್ಯಕ್ಷ ರಿಯಾಝ್ ಕಲ್ಲಾಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News