ಸಿಎಂ ನಿವಾಸದ ಬಳಿ ಮತ್ತೊಂದು `ಗಾಂಜಾ' ಪ್ರಕರಣ: ಓರ್ವ ವಶಕ್ಕೆ
Update: 2022-01-30 20:39 IST
ಬೆಂಗಳೂರು, ಜ. 30: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂಭಾಗ ರಸ್ತೆಯಲ್ಲಿ ಮತ್ತೊಂದು `ಗಾಂಜಾ' ಪ್ರಕರಣ ಪತ್ತೆಯಾಗಿದೆ.
ಬೊಮ್ಮಾಯಿ ಅವರ ಆರ್‍ಟಿ ನಗರದ ನಿವಾಸದ ಬಳಿಯ ಬೀಡಾ ಅಂಗಡಿಯಲ್ಲೇ ಸಿಹಿ ತಿಂಡಿಪೊಟ್ಟಣದಲ್ಲಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಯು ಗಾಂಜಾವನ್ನು ಇಟ್ಟು ರೂ.50 ರಿಂದ 100ಕ್ಕೆ ಮಾರಾಟ ಮಾಡುತ್ತಿದ್ದ. ಈ ಸಂಬಂಧಿಸಿದಂತೆ ಖಚಿತವಾದ ಮಾಹಿತಿಯನ್ನು ಆಧರಿಸಿ ಬೀಡಾ ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿ 5 ಕೆಜಿ ಗಾಂಜಾ ಗುಳಿಗೆಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಆರ್‍ಟಿನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.