×
Ad

ಎಚ್ಎಎಲ್ ಜಗದೀಶ ನಗರ: 7.55 ದಶಲಕ್ಷ ಲೀ. ಸಾಮರ್ಥ್ಯದ ನೀರು ಸಂಗ್ರಹಾಗಾರ ಲೋಕಾರ್ಪಣೆ

Update: 2022-01-31 10:10 IST

ಬೆಂಗಳೂರು, ಜ.31: ನಗರದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಎಚ್ಎಎಲ್ ಜಗದೀಶ ನಗರದಲ್ಲಿ ಬಿ.ಡಬ್ಲ್ಯು.ಎಸ್‍.ಎಸ್.ಬಿ. ವತಿಯಿಂದ ನಿರ್ಮಿಸಲಾಗಿರುವ 7.55 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೀರು ಸಂಗ್ರಹಾಗಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಲೋಕಾರ್ಪಣೆ ಮಾಡಿದರು.

ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಹಕಾರ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News