×
Ad

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರ ಮನೆಗೆ ಯು.ಟಿ. ಖಾದರ್ ಭೇಟಿ

Update: 2022-01-31 19:54 IST

ಮಂಗಳೂರು, ಜ.31: ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ರಾಜ್ಯ ಅಲ್ಪಸ್ಪಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರ ನಿವಾಸಕ್ಕೆ ಮಾಜಿ ಸಚಿವ, ಶಾಸಕ, ವಿಧಾನ ಸಭೆಯ ಪ್ರತಪಕ್ಷದ ನೂತನ ಉಪ ನಾಯಕ ಯು.ಟಿ. ಖಾದರ್ ಸೋಮವಾರ ಭೇಟಿ ನೀಡಿದರು.

ಈ ಸಂದರ್ಭ ಮುಹಮ್ಮದ್ ಮಸೂದ್ ಅವರು ಯು.ಟಿ.ಖಾದರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಮೇಯರ್ ಕೆ. ಅಶ್ರಫ್, ಮನಪಾ ಸದಸ್ಯರಾದ ಶಂಸುದ್ಧೀನ್ ಎಚ್‌ಬಿಟಿ, ಅಬ್ದುಲ್ಲ ತೀಫ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಕುದ್ರೋಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಬೀದ್ ಜಲಿಹಾಲ್, ಉಪಾಧ್ಯಕ್ಷರಾದ ಜಯರಾಂ ಕೋಟ್ಯಾನ್, ಡಾ. ಮುಹಮ್ಮದ್ ಆರೀಫ್ ಮಸೂದ್, ಬಿ. ಅಬೂಬಕ್ಕರ್, ಯೂಸುಫ್ ಕಾರ್ದಾರ್, ಸಿ.ಎಂ. ಮುಸ್ತಫ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News