×
Ad

'ಹಿಜಾಬ್ ಮೂಲಭೂತ ಹಕ್ಕುʼ ಎಂದು ಘೋಷಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

Update: 2022-01-31 20:12 IST

ಉಡುಪಿ: ಇಲ್ಲಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ವಿವಾದಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯೋರ್ವ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. 

ಭಾರತ ಸಂವಿಧಾನದ 14 ಮತ್ತು 25 ನೇ ವಿಧಿಯನ್ವಯ ವಿದ್ಯಾರ್ಥಿನಿ  ಹಿಜಾಬ್ ಧರಿಸುವುದು ಆಕೆಯ  ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ  ರೇಶಮ್ ಫಾರೂಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿ ಪರ ವಕೀಲರಾದ ಶತಾಬಿಶ್ ಶಿವಣ್ಣ, ಅರ್ನವ್ ಎ ಬಾಗಲವಾಡಿ ಮತ್ತು ಅಭಿಷೇಕ್ ಜನಾರ್ದನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಮತ್ತು ಕಾಲೇಜು ಆಡಳಿತದ ಯಾವುದೇ ಹಸ್ತಕ್ಷೇಪವಿಲ್ಲದೆ ಅನುಮತಿ ನೀಡಬೇಕೆಂದು ಕೋರಿದ್ದಾರೆ.

'ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವಂತೆ  ಕಾಲೇಜಿಗೆ ಮಧ್ಯಂತರ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರುತ್ತೇವೆ'' ಎಂದು ಶಿವಣ್ಣ ಹೇಳಿದರು.

“ವಿಚಾರಣೆಗೆ  ಬಂದಾಗ, ವಿದ್ಯಾರ್ಥಿಗಳಿಗೆ ಮಧ್ಯಂತರ ಪರಿಹಾರವನ್ನು ನೀಡುವಂತೆ ನಾವು ನ್ಯಾಯಾಲಯವನ್ನು ಕೋರುತ್ತೇವೆ. ನ್ಯಾಯಾಲಯವು ಅದರ ನಿಯಮದ ಪ್ರಕಾರ ಹೋಗುತ್ತದೆ ಮತ್ತು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯ ಮತ್ತು ಕಾಲೇಜನ್ನು ಕೇಳುತ್ತದೆ, ಆದ್ದರಿಂದ ಈ ಮಧ್ಯೆ, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಕಾಲೇಜಿಗೆ ನಿರ್ದೇಶನ ನೀಡುವಂತೆ ನಾವು ನ್ಯಾಯಾಲಯಕ್ಕೆ ಕೋರುತ್ತೇವೆ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News