×
Ad

ಅಶ್ಲೀಲ ವೆಬ್ ಸೈಟ್ ನಲ್ಲಿ ತನ್ನದೇ 'ಖಾಸಗಿ ವಿಡಿಯೋ' ಪತ್ತೆ: ಯುವಕನಿಂದ ಪೊಲೀಸರಿಗೆ ದೂರು

Update: 2022-02-01 17:16 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.1: ಗೆಳತಿ ಜೊತೆ ಕಳೆದಿದ್ದ ತನ್ನದೇ ಖಾಸಗಿ ವಿಡಿಯೊ ನೋಡಿದ ಯುವಕನೊಬ್ಬ, ಈ ಸಂಬಂಧ ದುಷ್ಕರ್ಮಿಗಳ ಪತ್ತೆಗಾಗಿ ನಗರಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ನಗರದ ಆಸ್ಟಿನ್ ಟೌನ್ ನಿವಾಸಿ ಆಗಿರುವ ಯುವಕ ಇತ್ತೀಚೆಗೆ ಆನ್‍ಲೈನ್‍ನಲ್ಲಿ ತಾನು ಗೆಳತಿ ಜೊತೆ ಕಳೆದ ನಗ್ನ ವಿಡಿಯೊ ಪತ್ತೆಯಾಗಿದೆ. ಇದನ್ನು ನೋಡಿದ ಯುವಕ ಆತಂಕಕ್ಕೆ ಒಳಗಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ ವಿಡಿಯೊ ರದ್ದು ಮಾಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News